ಸಿದ್ದರಾಮಯ್ಯ 2.0 ಸರ್ಕಾರದಲ್ಲಿ ತುಲಕ್​ ದರ್ಬಾರ

03GDG01
Published on

ಮುಸ್ಲಿಂ ತುಷ್ಟೀಕರಣ ಸರಿಯಲ್ಲ: ಶಾಸಕ ಸಿ.ಸಿ. ಪಾಟೀಲ

ಮುಸ್ಲಿಂ ಏಳ್ಗೆಗೆ ಇರುವ ವಕ್ಫದಿಂದ ಮುಸ್ಲಿಂಮರಿಗೆ ದ್ರೋಹ: ಎಸ್​.ವಿ. ಸಂಕನೂರು

ವಿಜಯವಾಣಿ ಸುದ್ದಿಜಾಲ, ಗದಗ

ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ವಕ್ಫ ಪ್ರಕರಣ ಕುರಿತು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಮತ್ತು ವಿಧಾನ ಪರಿಷತ್​ ಶಾಸಕ ಎಸ್​.ವಿ. ಸಂಕನೂರು ಅವರು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ವಕ್ಫ ಮಂಡಳಿ ನಿಯಮಗಳು, ಮುಸ್ಲಿಂ ತುಷ್ಟೀಕರಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಸರ್ಕಾರದ ಆಥಿರ್ಕ ದಿವಾಳಿತನ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು, ರಾಜ್ಯದಲ್ಲಿ ತುಲಕ್​ ದರ್ಬಾರ ಆಡಳಿತ ನಡೆಯುತ್ತಿದೆ. ಹೀಗೆ ಮುಂದುವರಿದರೆ ಭಾರತ ಮೊತ್ತೊಂದು ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಂತೆ ದಿವಾಳಿತ ಆಗುವುದರಲ್ಲಿ ಸಂದೇಹವಿಲ್ಲ ಎಂದು ಆರೋಪಿಸಿದರು.

ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮತ್ತು ಜಮ್ಮೀರ್​ ಅಹಮ್ಮದ ಹೇಳಿಕೆಗೆ ಒಂದಕ್ಕೊಂದು ತಾಳೆಯೇ ಆಗುತ್ತಿಲ್ಲ. ಒಬ್ಬರು ತೊಟ್ಟಿಲು ತೂಗುತ್ತಾರೆ. ಮತ್ತೊಬ್ಬರು ಚಿವುಟುತ್ತಾರೆ. ಬಿಜಾಪುರದಲ್ಲಿ ಏಕಾಏಕಿ ರೈತರಿಗೆ ನೋಟೀಸ್​ ನೀಡಲಾಗಿದೆ. ರೈತರನ್ನು ಒಕ್ಕಲೆಬಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯ ಅವರನ್ನು ಕೇಳಿಯೇ ವಕ್ಫ ಕುರಿತು ನೋಟೀಸ್​ ನೀಡಲು ಸೂಚಿಸಲಾಗಿತ್ತು ಎಂದು ಸಚಿವ ಜಮ್ಮೀರ ಅಹಮ್ಮದ ಹೇಳುತ್ತಾರೆ. ಇದರಿಂದ ರೈತರಿಗೆ ನೀಡುವ ಸಂದೇಶವಾದರೂ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

13ನೇ ಶತಮಾನದ ಸಿಂಧಗಿ ಮಠದ ಆಸ್ತಿಯೂ ವಕ್ಫ ಆಸ್ತಿ ಆಗಿದೆ. ಬೀರೇಶ್ವರ ದೇವಸ್ಥಾನದ ಆಸ್ತಿಯೂ ವಕ್ಫ ಎಂದು ನಮೂದಾಗಿದೆ. ಬೀರೇಶ್ವರ ದೇವಸ್ಥಾನಕ್ಕೆ ಕುತ್ತು ಬಂದಾಗ ಸಿದ್ದರಾಮಯ್ಯ ಅವರು ಎಚ್ಚುತ್ತಕೊಳ್ಳಬೇಕಿತ್ತು. ಆದರೆ, ಮತಬ್ಯಾಂಕ್​ ಗಾಗಿ ಅತಿಯಾದ ಮುಸ್ಲಿಂ ತುಷ್ಟೀಕರಣ ನಡೆಯುತ್ತಿದೆ. ಅಧಿಕಾರ ಇಂದು, ನಅಳೆ ಬರಬಹುದು, ಹೋಗಬಹುದು. ಆದರೆ, ಮಕ್ಕಳು, ಮೊಮ್ಮಕ್ಕಳ ಭವಿಷ್ಯವಾದರೂ ಗಮನಿಸಬೇಕು. ನಮ್ಮ ಸಂಸತಿ, ಸಂಪ್ರದಾಯ ಉಳಿದಾಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ರ್ಖಗೆ ಅಸಮಧಾನ: ಸಿಸಿಪಿ

ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಉಚಿತ ಗ್ಯಾರಂಟಿ ಯೋಜನೆ ಕುರಿತು ಅಸಮಧಾನ ವ್ಯಕ್ತಪಡಿಸಿದ್ದಾರೆ. ಉಚಿತ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಆತಿರ್ಕ ದಿವಾಳಿತನ ಎದುರಿಸುತ್ತಿದೆ ಎಂದು ಮಲ್ಲಿಕಾರ್ಜು ರ್ಖಗೆ ಅರಿತಿದ್ದಾರೆ. ಗುಂಡಿ ಮುಚ್ಚಲು ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಬಜೆಟ್​ ಗಾತ್ರಕ್ಕೂ, ಗ್ಯಾರಂಟಿ ಯೋಜನೆಗಳಿಗೂ ಹೊಂದಾಣಿಕೆ ಇಲ್ಲ. ಹಾಗಾಗಿ. ಮಹಾರಾಷ್ಟ್ರ ಚುನಾವಣೆಯಲ್ಲಿ ಉಚಿತ ಗ್ಯಾರಂಟಿ ಯೋಜನೆಗಳ ಘೋಷಣೆಗೂ ಮೊಸಲು ಬಜೆಟ್​ ಗಾತ್ರವನ್ನು ಗಮನಿಸಿಕೊಳ್ಳಬೇಕು ಎಂದು ಅಲ್ಲಿನ ಕಾಂಗ್ರೆಸ್​ ಮುಖಂಡರಿಗೆ ಮಲ್ಲಿಕಾರ್ಜು ರ್ಖಗೆ ಸೂಚನೆ ನೀಡಿದ್ದಾರೆ. ಪ್ರಣಾಳಿಕೆ ಸೂಕ್ತವಾಗಿದ್ದರೆ ಮಾತ್ರ ರಾಹುಲ್​ ಗಾಂಧಿ ಬಂದು ಬಿಡುಗಡೆ ಮಾಡಲಿದ್ದಾರೆ ಎಂದು ಪರೋಕ್ಷವಾಗಿ ಗ್ಯಾರಂಟಿ ಯೋಜನೆ ಘೋಷಣೆಗೂ ಮುನ್ನ ಎಚ್ಚರ ವಹಿಸಿ ಎಂದು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ "ಸರ್ಕಾರ ಆಥಿರ್ಕ ಪ್ರಗತಿ ಸಹಿಸದೇ ಬಿಜೆಪಿ ಅಪಪ್ರಚಾರ ಮಾಡುತ್ತಿದೆ' ಎಂದು ಅವರ ಪುತ್ರ, ಸಚಿವ ಪ್ರಿಯಾಂಕ್​ ಗಾಂಧಿ ಹೇಳುತ್ತಿರುವುದು ಅಸಮಂಜಸ ಎಂದು ಸಿ.ಸಿ. ಪಾಟೀಲ ವ್ಯಂಗ್ಯವಾಡಿದರು.

ಎಸ್​.ವಿ. ಸಂಕನೂರು ಮಾತನಾಡಿ, ಜಮೀರ್​ ಅಹಮ್ಮದ ಅವರಿಗೆ ಮುಸ್ಲಿಂ ಅವರ ಬಗ್ಗೆ ಕಾಳಜಿ ಇದ್ದರೆ ವಕ್ಫ ಆಸ್ತಿಗಳನ್ನು ಹಲವು ರಾಜಕಾರಣಿ ಕಬಳಿಸಿದ್ದನ್ನು ಮರಳಿ ಪಡೆಯಬೇಕು. ವರದಿ ಪ್ರಕಾರ 29000 ಎಕರೆಗೂ ಅಧಿಕ ವಕ್ಫ ಭೂಮಿಯನ್ನು ರಾಜಕಾರಣಿಗಳು ಕಬಳಿಸಿದ್ದಾರೆ. ಕಾಂಗ್ರೆಸ್​ ಅವಧಿಯಲ್ಲೇ ಮುಸ್ಲಿಂ ಸಮುದಾಯದ ಸಾಮಾಜಿಕ, ಆಥಿರ್ಕ, ಶೈಕ್ಷಣಿಕ ಸ್ಥಿತಿ ಕುರಿತು ನಿವೃತ್ತ ನ್ಯಾಯಮೂತಿರ್ ಆಯೋಗ ರಚನೆ ಮಾಡಲಾಗಿತ್ಯು ಮತ್ತು ಆಯೋಗದ ವರದಿಯಲ್ಲಿ ಮುಸ್ಲಿಂ ಸಮುದಾಯವು ಹಿಂದುಳೀಯಲು ವಕ್ಫ ಬೋರ್ಡ ಕಾರಣ ಎಂದು ತಿಳಿಸಲಾಗಿತ್ತು. ಆಯೋಗದ ಶಿಫಾರಸ್ಸುಗಳನ್ನು ಸಹ ರಾಜ್ಯ ಸರ್ಕಾರ ಅಳವಡಿಸಿಕೊಂಡಿಲ್ಲ. ಮುಸ್ಲಿಂ ಏಳ್ಗೆಗೆ ವಕ್ಫ ನಿಯಮಾವಳಿಗಳಿಗೆ ತಿದ್ದುಪಡಿ ಅವಶ್ಯ. ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಡಿ ಇಟ್ಟಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, ರಾಜ್ಯ ಸರ್ಕಾರದ ದುರಾಡಳಿತ ವಿರುದ್ಧ ರಾಜ್ಯಾದ್ಯಂತ ನ.4 ರಂದು ತಹಸೀಲ್ದಾರ ಕಚೇರಿ, ಜಿಲ್ಲಾಧಿಕಾರಿ ಕಚೇರಿ ಗೆ ಮುತ್ತಿಗೆ ಹಾಕಿ ಮನವಿ ನೀಡಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಎಂ.ಎಸ್​. ಕರಿಗೌಡರ್​, ಎಂ.ಎಂ. ಹಿರೇಮಠ, ಉಷಾ ದಾಸರ, ಅನಿಲ ಅಬ್ಬಿಗೇರಿ, ಚಂದ್ರು ಲಮಾಣಿ ಇದ್ದರು.

====

ಲಾ ಆಫ್​ ಲ್ಯಾಂಡ್​: 

ಸುದ್ದಿಗೋಷ್ಟಿಯಲ್ಲಿ ಲಾ ಆಪ್​ ಲ್ಯಾಂಡ್​(ಭೂ ಕಾಯ್ದೆಗಳು) ಕುರಿತು ವಿಷಯ ಪ್ರಸ್ತಾಪಿಸಿದ ಸಿ. ಸಿ. ಪಾಟೀಲ ಅವರು, ನಿಯಮ ಪ್ರಕಾರ ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಂಮಂತ್ರಿ, ಉಪ ಮುಖ್ಯಮಂತ್ರಿ, ಮಂತ್ರಿಗಳು ಹೇಳಿದಂತೆ ಜಿಲ್ಲಾಧಿಕಾರಿ ಕೇಳಬೇಕೆಂಬ ನಿಯಮ ಇಲ್ಲ. ಕಾನೂನಿನ ಚೌಕಟ್ಟಿಗೆ ಒಳಪಟ್ಟು ಜಿಲ್ಲಾಧಿಕಾರಿ ನಿರ್ಣಯ ತೆಗೆದುಕೊಳ್ಳಬಹುದು. ಆದರೆ, ಸಿದ್ದರಾಮಯ್ಯ ಅವರು ವಿಜಯಪುರ ಪ್ರಕರಣದಲ್ಲಿ ನಡೆದುಕೊಂಡಿರುವುದೇನು? ಅಧಿಕಾರಿಗಳನ್ನು ರ್ದುಬಳಕೆ ಮಾಡಿಕೊಂಡು ರೈತರಿಗೆ ನೋವು ನೀಡುತ್ತಿದ್ದಾರೆ. ಇಲ್ಲಿ ಸರ್ಕಾರ ತಪ್ಪುಮಾಡಿದೆ. ಅಧಿಕಾರಿಗಳು ತಪ್ಪು ಮಾಡಿಲ್ಲ. ಅಧಿಕಾರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

====

ಮತ್ತೇನು ಹೇಳಿದರು?

* ರಾಜ್ಯದಲ್ಲಿ ಸಿಎಂ ಯಾರು? ಡಿಸಿಎಂ ಯಾರು ಎಂಬ ಗೊಂದಲ ಮೂಡುತ್ತಿದೆ. ಮಾಧ್ಯಮದ ಮೂಲಕ ರಾಜ್ಯೋತ್ಸವದ ಶುಭಾಶಯಗಳನ್ನು ಕೇವಲ ಡಿಸಿಎಂ ಶಿವಕುಮಾರ ಹೇಳುತ್ತಿದ್ದಾರೆ ವಿನಃ ಕನ್ನಡ ರಾಜ್ಯೋತ್ಸವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಶುಭಾಶಯ ಹೇಳುತ್ತಿಲ್ಲ.

* ಕಾಂಗ್ರೆಸ್ಸಿನ ಸತ್ಯಕ್ಕೆ ದೂರವಾದ ಸುಳ್ಳು ಗ್ಯಾರಂಟಿಗಳನ್ನು ನಂಬಿ ಜನರು ಮತ ಹಾಕಿ ಕಾಂಗ್ರೆಸ್ಸಿಗೆ ಜನರು ಅಧಿಕಾರ ನೀಡಿದ್ದಾರೆ. ಕೇವಲ ಮುಸ್ಲೀಂ ಓಲೈಕೆಯಿಂದ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿಲ್ಲ. ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಜನರಿಗೆ ಮೋಸ ಮಾಡುತ್ತಿದೆ. ರಾಜ್ಯದ ಬೊಕ್ಕಸ ಲೂಟಿ ಮಾಡುವ ಎಲ್ಲ ಮಾರ್ಗಗಳನ್ನು ಕಾಂಗ್ರೆಸ್​ ಸರ್ಕಾರ ಹುಡುಕಿಕೊಂಡಿದೆ.

* ದೇಶದ ಪ್ರಧಾನಿ ಅವರಿಗೆ ರಾಜಕೀಯ ಪುಡಾರಿ ಎಂದು ಹೇಳುವ ಸಿಎಂ ಸಿದ್ದರಾಮಯ್ಯ ಯಾವ ಮನಸ್ಥಿತಿಯಲ್ಲಿ ಇದ್ದಾರೆ ಎಂದು ಪ್ರಭುದ್ಧ ಜನರು ಅರ್ಥೈಸಿಕೊಳ್ಳಬೇಕು.

* ವಕ್ಫ ಬೋರ್ಡ ನಿಯಮಾವಳಿಗಳಿಗೆ ಕೇಂದ್ರದ ಅಧಿವೇಶನದಲ್ಲಿ ತಿದ್ದುಪಡಿ ತಂದರೆ ಮಾತ್ರ ಮುಸ್ಲಿಂ ಸಮುದಾಯದ ಏಳ್ಗೆ ಸಾಧ್ಯ. ಇಲ್ಲವಾದರೆ ವಕ್ಫ ಆಸ್ತಿಯನ್ನು ಮುಸ್ಲಿಂ ಜನಪ್ರತಿನಿಧಿಗಳೇ ನುಂಗುತ್ತಾರೆ.

* ನಾನು ನಡೆಸುತ್ತಿರುವ ಸರ್ಕಾರ ಜನಪರ ಸರ್ಕಾರವೋ? ತುಲಕ್​ ಸರ್ಕಾರವೋ ಎಂದು ಸಿದ್ದರಾಮ್ಯ ತಮ್ಮ ಆತ್ಮಸಾಕ್ಷಿ ಕೇಳಬೇಕು. ಇಲ್ಲವಾದರೆ ಮಧ್ಯಂತರ ಚುನಾವಣೆಗೆ ನಾವು ಸಿದ್ಧ.

* ರಾಹುಲ್​ ಗಾಂಧಿ, ಪ್ರಿಯಾಂಕ ಗಾಂಧಿ ಕಾಂಗ್ರೆಸ್​ ಉಪ ಚುನಾವಣೆ ಪ್ರಚಾರಕ್ಕೆ ಬಂದರೆ, ಬಿಜೆಪಿಯಿಂದ ಎಸ್​.ವಿ. ಸಂಕನೂರು, ನಾನು(ಸಿ.ಸಿ. ಪಾಟೀಲ) ಚಂದ್ರು ಲಮಾಣಿ, ರಾಜು ಕುರಡಗಿ ಪ್ರಚಾರ ನಡೆಸಿ ಅಭ್ಯಥಿರ್ಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದರು.

===

ಕೋಟ್​:

ವಕ್ಫ ವಿಷಯದಲ್ಲಿ ರಾಜಕಾರಣ ಮಾಡುವುದಕ್ಕಿಂತ ನಮ್ಮ ಸಂಸತಿ ಏನೆಂಬುದನ್ನು ಜನಪ್ರತಿನಿದಿಗಳು ಅರಿತು ಉಳಿಸಿಕೊಳ್ಳಬೇಕು. ಮತ ಬ್ಯಾಂಕ್​ ಆಸೆಗೆಗಾಗಿ ಇವತ್ತು ಅಧಿಕಾರಕ್ಕೆ ನಡೆಸುತ್ತಿದ್ದಾರೆ. ನಾಳೆ ಮಕ್ಕಳಿಗೆ, ಮೊಮ್ಮಕ್ಕಳ ಪರಿಸ್ಥಿತಿ ಏನು ಎಂಬುದು ಕಾಂಗ್ರೆಸ್ಸಿಗೆ ಅರಿವಿಲ್ಲ.

- ಸಿ. ಸಿ. ಪಾಟೀಲ, ಶಾಸಕ

ಕೋಟ್​:

ವಕ್ಫ ಆಸ್ತಿ ಕುರಿತು ಪ್ರಕರಣ ಒಂದರಲ್ಲಿ ಸುಪ್ರೀಂ ಕೋರ್ಟ್​ ಕೂಡ ಪ್ರಶ್ನೆ ಮಾಡಿದ ಉದಾಹರಣೆ ಇದೆ. ವಕ್ಫ ಆಸ್ತಿಗೂ ಮುನ್ನ ಆಸ್ತಿಗಳು ಯಾರ ಒಡೆತನ ಆಸ್ತಿಗಳಾಗಿದ್ದವು ಎಂದು ಪ್ರಕರಣ ಒಂದರಲ್ಲಿ ದಾವೆದಾರರನ್ನು ಸುಪ್ರೀಂ ಕೋರ್ಟ್​ ಪ್ರಶ್ನಿಸಿದೆ.

- ಎಸ್​. ವಿ. ಸಂಕನೂರು, ವಿಧಾನ ಪರಿಷತ್​ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net