

ಚಿಕ್ಕಬಳಾಪುರ: ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿಗೆ ಒದಗಿಸುತ್ತಿರುವ ಅಲ್ಪ ಪರಿಹಾರ ಸಾಲದು. ಜತೆಗೆ ಸಮೀಕ್ಷೆ ಮತ್ತು ವಿತರಣೆ ವಿಳಂಬವಾಗುತ್ತಿರುವುದರ ಬಗ್ಗೆ ಗಮನ ಸೆಳೆಯಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಾಲೂಕಿನ ವಿವಿಧೆಡೆ ಮಳೆಬಾಧಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ವಾತನಾಡಿದರು.
ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಲಿಕಲ್ಲು ಮಳೆಗೆ ಬೆಳೆ ನಷ್ಟ ಉಂಟಾದಾಗ ಪ್ರತಿ ಹೆಕ್ಟೇರ್‌ಗೆ ತಲಾ 25 ಸಾವಿರ ರೂ ಪರಿಹಾರ ನೀಡಲಾಗಿತ್ತು. ಆದರೆ, ಈಗ ರಾಜ್ಯ ಬಿಜೆಪಿ ಸರ್ಕಾರವು ಒದಗಿಸುತ್ತಿರುವ ನೆರವು ತುಂಬಾ ಕಡಿಮೆ. ಇದಕ್ಕೆ ಎನ್‌ಡಿಆರ್‌ಎಫ್ ಮತ್ತು ವಿಶೇಷ ಅನುದಾನದಲ್ಲಿ ತ್ವರಿತ ಮತ್ತು ಹೆಚ್ಚಿನ ಪರಿಹಾರ ನೀಡುವ ನಿಟ್ಟಿನಲ್ಲಿ ಒತ್ತಡ ಹೇರಲು ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದಲ್ಲಿ ಮುಂಬರುವ ಅಧಿವೇಶನದಲ್ಲಿ ಪ್ರಶ್ನಿಸಲಾಗುತ್ತದೆ ಎಂದರು.
ಕಳೆದ 25 ದಿನಗಳಿಂದಲೂ ದಾಖಲೆ ಪ್ರವಾಣದಲ್ಲಿ ಮಳೆಗೆ ಬೆಳೆ ಮತ್ತು ಮನೆ ಹಾನಿ ಸಂಭವಿಸುತ್ತಿದೆ. ರಾಜ್ಯದ ಮೈಸೂರು, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ರಾಯಚೂರು ಸೇರಿದಂತೆ ಹಲವೆಡೆ ನಷ್ಟದಿಂದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಆದರೂ ಸಮೀಕ್ಷೆಯನ್ನು ವಿಳಂಬವಾಗಿ ಕೈಗೊಂಡಿರುವುದರ ಜತೆಗೆ ತ್ವರಿತ ಪರಿಹಾರ ಒದಗಿಸುವಲ್ಲೂ ಸಬೂಬು ಹೇಳಲಾಗುತ್ತಿದೆ. ಮತ್ತೊಂದೆಡೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದು ಜನ ಸಮಸ್ಯೆಯನ್ನು ಆಲಿಸುತ್ತಿಲ್ಲ. ಇದರ ಬಗ್ಗೆ ಟೀಕಿಸಿದ ಹಿನ್ನೆಲೆಯಲ್ಲಿ ಎರಡ್ಮೂರು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊವ್ಮಾಯಿ ಮಳೆ ಹಾನಿ ಪ್ರದೇಶದ ಪ್ರವಾಸ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ವಾಜಿ ಸಂಸದ ಎಂ.ವೀರಪ್ಪ ಮೊಯ್ಲಿ, ಶಾಸಕರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರೆಡ್ಡಿ, ವಿಧಾನಪರಿಷತ್ ವಾಜಿ ಸದಸ್ಯ ನಜೀರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ವಿನಯ್ ಶಾಮ್, ವಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಮುಖಂಡರಾದ ಲಾಯರ್ ನಾರಾಯಣಸ್ವಾಮಿ, ರಫೀವುಲ್ಲಾ, ಪ್ರೆಸ್ ಸೂರಿ, ಮಮತಾ ಮೂರ್ತಿ, ನಾಯನಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಇದ್ದರು.
ನಷ್ಟದಲ್ಲಿ ಕೃಷಿ ಕ್ಷೇತ್ರ: ಕೆರೆಗಳು ಮತ್ತು ರಾಜಕಾಲುವೆಗಳ ಒತ್ತುವರಿಯ ನಡುವೆ ಧಾರಾಕಾರ ಮಳೆಯ ನೀರು ತೋಟಗಳಿಗೆ ನುಗ್ಗಿ ಅಪಾರ ನಷ್ಟ ಉಂಟಾಗಿದೆ. ದುಬಾರಿ ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೂಲಿ ಕಾರ್ಮಿಕರ ನಿರ್ವಹಣೆ ಸೇರಿ ಇತರ ಚಟುವಟಿಕೆಗೆ ರೈತರು ಸಾಲ ಸೋಲ ವಾಡಿ ಕೃಷಿ ಕೈಗೊಂಡಿದ್ದಾರೆ. ಆದರೆ, ಕೈಗೆ ಲಾಭ ಸಿಗಬೇಕಾಗಿದ್ದ ಹಂತದಲ್ಲಿ ಮಳೆಗೆ ಬೆಳೆ ನಾಶವಾಗಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಕೇವಲ ಬಾಯಿ ವಾತಿಗೆ ರೈತಪರ ಸರ್ಕಾರ ಎಂದು ಹೇಳುವುದಲ್ಲ. ಅನ್ನದಾತರ ಸಂಕಷ್ಟಕ್ಕೆ ಪ್ರಾವಾಣಿಕವಾಗಿ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಒತ್ತಡ ಹೇರಲು ಕಾಂಗ್ರೆಸ್ ಎಲ್ಲ ರೀತಿಯ ಹೋರಾಟ ನಡೆಸಲಿದೆ ಎಂದರು.
ಅಧಿಕಾರದಿಂದ ಕೆಳಗಿಳಿಯಿರಿ: ಸಂಕಷ್ಟದಲ್ಲಿರುವ ಜನರು ಸಮಸ್ಯೆಗಳನ್ನು ಹೇಳಿಕೊಂಡಾಗ ಜನಪ್ರತಿನಿಧಿಗಳು ಆಲಿಸಬೇಕು. ಇದನ್ನು ಬಿಟ್ಟು ತೆಗಳುವಿಕೆ, ಅಸಮರ್ಪಕ ಉತ್ತರ ನೀಡಿಕೆಯ ವರ್ತನೆ ಸರಿಯಲ್ಲ. ಜನಪರ ಸೇವೆ ವಾಡಲು ಸಾಧ್ಯವಾಗದಿದ್ದಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ.ಸುಧಾಕರ್ ಜಲಾವೃತ ಪ್ರದೇಶದಲ್ಲಿನ ಬಡಾವಣೆಗಳ ಜನರನ್ನು ನಿರ್ಲಕ್ಷ್ಯದ ನೆಪದಲ್ಲಿ ತರಾಟೆಗೆ ತೆಗೆದುಕೊಂಡಿರುವುದರ ಬಗ್ಗೆ ಕಿಡಿಕಾರಿದರು.
ವಿವಿಧೆಡೆ ಭೇಟಿ, ಪರಿಶೀಲನೆ: ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಸಿದ್ದರಾಮಯ್ಯ ಭೇಟಿ ನೀಡಿ ದಾಖಲೆ ಪ್ರವಾಣದ ಧಾರಾಕಾರ ಮಳೆಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು. ನಗರದ ಬಿ.ಬಿ.ರಸ್ತೆಯಲ್ಲಿ ಹಾದು ಹೋಗಿರುವ ಕಂದವಾರ ಕೆರೆಯ ರಾಜಕಾಲುವೆಯಲ್ಲಿ ನೀರಿನ ಹರಿವು, ರಸ್ತೆ ಸಂಚಾರಕ್ಕೆ ಅಡ್ಡಿ ಮತ್ತು ಎದುರಾಗಿರುವ ಸಮಸ್ಯೆಯ ಬಗ್ಗೆ ವಾಹಿತಿ ಪಡೆದುಕೊಂಡರು. ಸೌಮ್ಯ ಕ್ಲಿನಿಕ್ ಹಿಂಭಾಗದಲ್ಲಿನ ಬಡಾವಣೆಯಲ್ಲಿ ಮನೆಗೆ ನುಗ್ಗಿ ತೊಂದರೆ ಅನುಭವಿಸಿದ ಸ್ಥಳೀಯರ ಅಹವಾಲು ಮತ್ತು ನುಗ್ಗತಹಳ್ಳಿಯಲ್ಲಿ ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾದ ರೈತರ ಸಮಸ್ಯೆಗಳನ್ನು ಆಲಿಸಿದರು.
ಇದೇ ವೇಳೆ ಬಡಾವಣೆಗಳಿಗೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಸೇರಿ ನಿಯವಾನುಸಾರದ ದಾಖಲೆ ಹೊಂದಿರುವುದನ್ನು ಪರಿಶೀಲಿಸಿ ನಿವೇಶನಗಳನ್ನು ಖರೀದಿಸಲಾಗಿದೆ. ಸಾಲ ಸೋಲ ವಾಡಿ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಆದರೆ, ಇದೀಗ ಅಧಿಕಾರಿಗಳು ಪರಿಹಾರ ಕ್ರಮ ಕೈಗೊಳ್ಳದೇ ತಗ್ಗು ಪ್ರದೇಶದಲ್ಲಿ ಕಟ್ಟಡಗಳು ಜಲಾವೃತಗೊಂಡರೆ ಏನು ವಾಡುವುದು ಎನ್ನುತ್ತಿದ್ದು ಇಲ್ಲಿ ಮೊದಲೇ ಏಕೆ ಬಡಾವಣೆಗಳ ನಿರ್ವಾಣಕ್ಕೆ ಅನುಮತಿ ಕೊಟ್ಟರು? ಸರ್ಕಾರದ ಮೇಲೆ ಒತ್ತಡ ಹೇರಿ ನ್ಯಾಯ ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಕಣ್ಣೀರಿಟ್ಟ ಸಂತ್ರಸ್ತ ಮಹಿಳೆಯರು: ಜಲಾವೃತ ಪ್ರದೇಶದ ಬಡಾವಣೆಗಳಲ್ಲಿನ ನಿವಾಸಿಗಳ ಮನವಿಗೆ ಸಚಿವ ಡಾ ಕೆ.ಸುಧಾಕರ್ ಮತ್ತು ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಸ್ಥಳೀಯರು ಕಣ್ಣೀರು ಸುರಿಸುತ್ತ ಸಿದ್ದರಾಮಯ್ಯ ಎದುರು ಅಸಹಾಯಕತೆ ವ್ಯಕ್ತಪಡಿಸಿದರು. ಹಲವು ವರ್ಷಗಳಿಂದ ಬಡಾವಣೆಯಲ್ಲಿ ವಾಸ ಮಾಡುತ್ತಿದ್ದೇವೆ. ಕಾಲುವೆ ಮುಚ್ಚಿ ಹಾಕಿ, ರಸ್ತೆಯನ್ನು ಎತ್ತರಕ್ಕೆ ನಿರ್ಮಿಸಿದ ಹಿನ್ನೆಲೆಯಲ್ಲಿ ಮಳೆಯ ನೀರು ಮನೆಗಳಿಗೆ ನುಗ್ಗುತ್ತಿದೆ. ಇದನ್ನು ಪ್ರಶ್ನಿಸಿದಾಗ ಬೇರೆಡೆ ಸ್ಥಳಾಂತರಗೊಳ್ಳಿ ಅಥವಾ ನೀರನ್ನು ಹೊರಗೆ ಹಾಕಿ ಎಂದು ಸಲಹೆ ನೀಡುತ್ತಾರೆ. ಜತೆಗೆ ದಬಾಯಿಸುತ್ತಾರೆೆ ಎಂದು ಮಹಿಳೆಯರು ಆರೋಪಿಸಿದರು.
ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ: ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಅವರ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಹಿಂದೆ ಕಾಂಗ್ರೆಸ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಜೆಡಿಎಸ್ ಸೋಲಿಸಿದ್ದಕ್ಕೆ ಸಂಬಂಧಿಸಿ, ಎಚ್.ಡಿ.ಕುಮಾರಸ್ವಾಮಿ ಏನು ಹೇಳಿದರೋ ನನಗೆ ಗೊತ್ತಿಲ್ಲ. ಈಗಾಗಲೇ ಹಲವು ಬಾರಿ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ ಎಂದರು.