ಸಿದ್ದರಾಮಯ್ಯ ಸಾಧನೆ ಪರಿಚಯ: ಬ್ರಹ್ಮಾವರದಲ್ಲಿ ಮಾಜಿ ಶಾಸಕ ದತ್ತ ಆಶಯ

siddu
Published on

ಬ್ರಹ್ಮಾವರ: ಮತಾಂಧರ ವಿರುದ್ಧ ಧ್ವನಿ ಎತ್ತಬಲ್ಲ ಏಕೈಕ ವ್ಯಕ್ತಿ ಸಿದ್ದರಾಮಯ್ಯ ಎಂದು ಕಡೂರು ಮಾಜಿ ಶಾಸಕ ವೈ. ಎಸ್.ವಿ. ದತ್ತ ಹೇಳಿದರು.

ಬ್ರಹ್ಮಾವರ ಬಂಟರ ಭವನದಲ್ಲಿ ಭಾನುವಾರ ಸಿದ್ದರಾಮೋತ್ಸವ ಪ್ರಯುಕ್ತ ಹಮ್ಮಿಕೊಂಡ ಜನನಾಯಕ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಿದ್ದರಾಮಯ್ಯ ಅವರ ಸಾಧನೆಗಳನ್ನು ಕರಾವಳಿ ಜಿಲ್ಲೆಗೆ ಪರಿಚಯಿಸಬೇಕಾಗಿದೆ. ಬದ್ಧತೆ ಮತ್ತು ನಿಖರತೆ ವಿಷಯದಲ್ಲಿ ಅವರು ಯಾವತ್ತೂ ಬದಲಾಗದ ವ್ಯಕ್ತಿ. ರಾಜ್ಯಕ್ಕೆ ಅವರ ಆಡಳಿತ ಬೇಕಾಗಿದೆ ಎಂದರು.

ಲೇಖಕ ಬಿ. ಚಂದ್ರೇಗೌಡ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕುಂದಾಪುರ ವಕೀಲರ ಸಂಘ ನಿಕಟಪೂರ್ವ ಅಧ್ಯಕ್ಷ ಎಸ್.ನಿರಂಜನ ಹೆಗ್ಡೆ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಜಯನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಜನಾಬ್ ಕೋಟ ಇಬ್ರಾಹಿಂ ಸಾಹೇಬ್, ಕೆಥೋಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ವಲೇರಿಯನ್ ಮಿನೇಜಸ್, ಸಾಮಾಜಿಕ ಹೋರಾಟಗಾರ್ತಿ ಗೌರಿ ಕೆಂಜೂರು, ಸಾಸ್ತಾನ ಸಿಎ ಬ್ಯಾಂಕ್ ಅಧ್ಯಕ್ಷ ಶ್ರೀಧರ್ ಪಿ.ಎಸ್., ಅಂಜಲಿ ಆಸ್ಪತ್ರೆಯ ಡಾ.ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ಡಾ.ಗಣೇಶ್ ಗಂಗೊಳ್ಳಿ ಮತ್ತು ತಂಡದವರಿಂದ ದೇಶ ಭಕ್ತಿಗೀತೆ ಜರುಗಿತು.

ಸಿದ್ದರಾಮಯ್ಯ ಅವರ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಕೀಲ ಮಂಜುನಾಥ ಗಿಳಿಯಾರು ಪ್ರಾಸ್ತಾವಿಕ ಮಾತನಾಡಿದರು. ಅಭಿಜಿತ್ ಪಾಂಡೇಶ್ವರ, ಶಶಿಧರ್ ಹೆಮ್ಮಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net