ಇಂತಹದೇ ನಿವೇಶನ ಬೇಕೆಂಬ ಸಿದ್ದರಾಮಯ್ಯ ಅವರ ಪತ್ರ ಬಹಿರಂಗ!

4
Published on

ಮೈಸೂರು: ‘ನಮಗೆ ನಿವೇಶನ ನೀಡಿ ಎಂದು ಯಾರನ್ನು ಕೇಳಲಿಲ್ಲ’ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1984ರಲ್ಲಿ ಇಂತಹದೇ ನಿವೇಶನ ನೀಡುವಂತೆ ಮೈಸೂರು ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಗೆ ಲಿಖಿತವಾಗಿ ಪತ್ರ ಬರೆದಿದ್ದಾರೆ ಎಂದು ಆರೋಪಿಸಿ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ದಾಖಲೆ ಪತ್ರವೊಂದನ್ನು ಬಿಡುಗಡೆ ಮಾಡಿದ್ದಾರೆ.

ಈ ದಾಖಲೆಯನ್ನು ಮಾಹಿತಿ ಹಕ್ಕು ಕಾಯಿದೆಯಡಿ ಪಡೆದುಕೊಂಡಿರುವ ಕೃಷ್ಣ, ಆ ಪತ್ರದಲ್ಲಿ ಸಿದ್ದರಾಮಯ್ಯ ಅವರು ಮಂಡಳಿ ಅಧ್ಯಕ್ಷರಿಗೆ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಜಯನಗರ ತೊಣಚಿಕೊಪ್ಪಲ್ 2ನೇ ಹಂತ, ಎಂ ಬ್ಲಾಕ್‌ನಲ್ಲಿ ನಿವೇಶನ ಸಂಖ್ಯೆ 9, 50*80 ಅಳತೆಯ ನಿವೇಶನ ಕೊಟ್ಟಿದ್ದೀರಿ. ಈ ನಿವೇಶನಕ್ಕೆ ಬದಲಾಗಿ ಜಯನಗರ ಜಿ ಮತ್ತು ಎಚ್.ಬ್ಲಾಕ್‌ನಲ್ಲಿ ಖಾಲಿ ಇರುವ ನಿವೇಶನವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ನಾನು ಯಾರ ಬಳಿಯೂ ನಿವೇಶನ ಕೋರಿ ಅರ್ಜಿ ಸಲ್ಲಿಸಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net