ರೋಣಕ್ಕೆನಾಳೆ ಸಿದ್ದರಾಮಯ್ಯ ಆಗಮನ

Siddaramaiah
Published on

ರೋಣ: ಫೆ. 28ರಂದು ಆಯೋಜಿಸಿರುವ ಪ್ರಜಾಧ್ವನಿ ಯಾತ್ರೆ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೋಣ ಪಟ್ಟಣಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎಂದು ಗದಗ ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ರಾಜೀವಗಾಂಧಿ ಕಾಲೇಜು ಮೈದಾನದಲ್ಲಿ ಪೂರ್ವಸಿದ್ಧತೆ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಫೆ. 28ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸೂಡಿ ವೃತ್ತದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ.ಬಿ. ಪಾಟೀಲ, ಎಚ್.ಕೆ. ಪಾಟೀಲ, ಸಲೀಂ ಅಹ್ಮದ್, ಜಮೀರ ಅಹ್ಮದ್, ಸತೀಶ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳ್ಕರ ಒಳಗೊಂಡು ಪ್ರಮುಖ ನಾಯಕರ ರೋಡ್ ಶೋ ನಡೆಯಲಿದ್ದು, ಮಧ್ಯಾಹ್ನ 11-30ಕ್ಕೆ ಪಟ್ಟಣದ ರಾಜೀವಗಾಂಧಿ ಕಾಲೇಜ್ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ವೀರಣ್ಣ ಶೆಟ್ಟರ, ಪರುಶರಾಮಪ್ಪ ಅಳಗವಾಡಿ, ಬಸವರಾಜ ನವಲಗುಂದ, ರಾಜಣ್ಣ ಸುಂಕದ, ಯೂಸೂಫ್ ಇಟಗಿ, ಪ್ರಭು ಮೇಟಿ ಇದ್ದರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net