‘ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ’

'Siddaramaiah will continue as CM'
Published on

ಕುಶಾಲನಗರ:

ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಮುಂದುವರೆಯಲಿದ್ದು ಅವರ ಕುರ್ಚಿ ಭದ್ರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಕುಶಾಲನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯಲಿದ್ದಾರೆ ಎಂದು ವಿಪಕ್ಷಗಳು ಹಗಲುಕನಸು ಕಾಣುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಏನೇ ಷಡ್ಯಂತರ ಮಾಡಿದರೂ ರಾಜ್ಯದ ಜನತೆಗೆ ಸಿದ್ದರಾಮಯ್ಯ ಏನೆಂದು ಗೊತ್ತಿದೆ. ಮುಡಾ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಅನಗತ್ಯವಾಗಿ ಎಳೆದು ತರಲಾಗಿದೆ.

ಆಪರೇಷನ್ ಮಾಡಿ ಸರ್ಕಾರಗಳನ್ನು ಅತಂತ್ರಗೊಳಿಸಿ ವಾಮ ಮಾರ್ಗಗಳಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಗೆ ಈ ಬಾರಿ ಯಾವುದೇ ಆಪರೇಷನ್ ತಂತ್ರ ಸಫಲವಾಗುತ್ತಿಲ್ಲ. ಹಾಗಾಗಿ ದಿನ ಬೆಳಗಾದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಗ್ಗೆ ಕಪೋಲಕಲ್ಪಿತ ಹೇಳಿಕೆಗಳನ್ನು ಕೊಡುವ ಮೂಲಕ ರಾಜ್ಯದ ಏಳು ಕೋಟಿ ಜನರನ್ನು ನಂಬಿಸಲು ನಡೆಸುತ್ತಿರುವ ಹುನ್ನಾರ ಇದಾಗಿದೆ. ಆದರೆ, ರಾಜ್ಯದ ಜನ ಈ ಹಿಂದೆ ವೀರೇಂದ್ರ ಪಾಟೀಲರಿಗೆ ನೀಡಿದ್ದ ಜನಾದೇಶದ ನಂತರ ಈ ಬಾರಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ 136 ಮಂದಿ ಶಾಸಕರನ್ನು ಆರಿಸಿ ಕಳುಹಿಸುವ ಮೂಲಕ ಸ್ಪಷ್ಟ ಜನಾದೇಶ ನೀಡಿರುವಾಗ ವಿಪಕ್ಷಗಳ ಯಾವ ತಂತ್ರಗಳು ಕೂಡ ಫಲಿಸುವುದಿಲ್ಲ ಎಂದರು.
ಜಿಲ್ಲೆಯ ಎಲ್ಲಾ ಇಲಾಖೆಗಳಿಗೆ ಅಗತ್ಯವಿರುವ ಅನುದಾನಗಳನ್ನು ಸರ್ಕಾರದಿಂದ ತರಲಾಗುತ್ತಿದೆ.

ಸಣ್ಣ ನೀರಾವರಿ ಇಲಾಖೆಯೊಂದಕ್ಕೆ ಈ ಬಾರಿ 30 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳ ಲಾಭ ಬಹಳಷ್ಟು ಜನರಿಗೆ ಲಭಿಸುತ್ತಿದೆ. ಅಭಿವೃದ್ದಿ ಯೋಜನೆಗಳ ಅನುದಾನಕ್ಕೂ ಗ್ಯಾರಂಟಿ ಯೋಜನೆಗಳಿಗೂ ಯಾವ ಸಂಬAಧವೂ ಇಲ್ಲ. ಅನುದಾನಗಳು ನಿಂತಿಲ್ಲ.

ಸಿಎಂ ಕಾನೂನು ಸಲಹೆಗಾರರೆಂದು ವಿರಾಜಪೇಟೆಗೆ ಹೆಚ್ಚು ಅನುದಾನ ಎಂಬುದು ಸುಳ್ಳು.
ಡಾ. ಮಂತರ್ ಗೌಡು ಕೂಡ ಅತ್ಯಂತ ಕ್ರಿಯಾಶೀಲರಿದ್ದಾರೆ. ಅವರು ಹಿಡಿದ ಕೆಲಸವನ್ನು ಮಾಡದೇ ವಿರಮಿಸುವುದಿಲ್ಲ. ಬೆಂಗಳೂರಿಗೆ ಬಂದಾಗ ಸಂಬAಧಪಟ್ಟ ಮಂತ್ರಿಗಳನ್ನು ಕಂಡು ಜಿಲ್ಲೆಗೆ ಏನು ಬೇಕೋ ಅದು ತರುವಲ್ಲಿ ಸಫಲರಾಗುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಸಚಿವ ಬೋಸರಾಜು ಪ್ರತಿಕ್ರಿಯಿಸಿದರು.

ಇದೇ ಮೊದಲ ಬಾರಿಗೆ ಮಡಿಕೇರಿ ಹಾಗೂ ಗೋಣಿಕೊಪ್ಪ ದಸರಾ ಕಾರ್ಯಕ್ರಮಗಳಿಗೆ ಹೆಚ್ಚು ಅನುದಾನ ನೀಡಲಾಗಿದೆ. ಭಾಗಮಂಡಲದಲ್ಲಿ ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಲುಸೇತುವೆ ಯೋಜನೆಗೆ ಹೆಚ್ಚಿನ ಅನುದಾನ ತಂದು ಕಾಮಗಾರಿ ಪೂರ್ಣಗೊಳಿಸಲಾಗಿದೆ. ಹಾಗೆಯೇ ತಲ ಕಾವೇರಿ ಜಾತ್ರೆಗೂ ಹೆಚ್ಚಿನ ಅನುದಾನ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ ಗುಂಡೂರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷಿö್ಮÃ ಚಂದ್ರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net