ಆರ್.ವಿ. ದೇಶಪಾಂಡೆ ಹೇಳಿಕೆ; ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ

4 Dwd 1 R.V.Deshapande
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯದಲ್ಲಿ ಪಂಚ ಗ್ಯಾರಂಟಿಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗುತ್ತಿದೆ. ಹಲವಾರು ಕಾರ್ಯಕ್ರಮಗಳನ್ನ ಅನುಷ್ಠಾನಕ್ಕೆ ತರಲಾಗಿದೆ. ಸಿದ್ದರಾಮಯ್ಯ ಉತ್ತಮವಾಗಿ ಸಿಎಂ ಹುದ್ದೆ ನಿಭಾಯಿಸುತ್ತಿದ್ದಾರೆ. ಅವರೇ 5 ವರ್ಷ ಮುಖ್ಯಮಂತ್ರಿ ಆಗಿ ಇರುತ್ತಾರೆ. ನಾನು ಸಿಎಂ ರೇಸ್‌ನಲ್ಲಿ ಇಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಮೇಲೆ ಆಸೆ ಪಡಲು ಅವಕಾಶ ಇಲ್ಲ. ಸತೀಶ ಜಾರಕಿಹೊಳಿ ಒಬ್ಬ ಜವಾಬ್ದಾರಿಯುತ್ತ ಸಚಿವರು. ಹೆಚ್ಚಿನ ಅನುದಾನ ಕೋರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಭೇಟಿಗೆ ದೆಹಲಿಗೆ ತೆರಳಿದ್ದಾರೆ ಎಂದರು.
5 ಗ್ಯಾರಂಟಿಗಳಿ0ದ ಜನರು ಮದ್ಯ ಸೇವನೆಗೆ ದಾಸರಾಗಿದ್ದಾರೆ ಎಂದು ವರೂರು ಜೈನ ಮುನಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಮದ್ಯ ಸೇವನೆ ಸಿದ್ದರಾಮಯ್ಯ ಸರ್ಕಾರ ಬಂದಾಗ ಆರಂಭವಾಗಿಲ್ಲ. ಅಜ್ಜ- ಮುತ್ತಜ್ಜರ ಕಾಲದಿಂದ ಆರಂಭವಾಗಿದೆ. ಕೆಲವರು ಹೆಚ್ಚು ಮದ್ಯ ಸೇವಿಸುತ್ತಾರೆ. ಮದ್ಯ ಮಾರಾಟ ಬಂದ್ ಮಾಡುವ ಕಾರ್ಯಕ್ರಮ ಯಾವ ಸರ್ಕಾರದಲ್ಲೂ ಇಲ್ಲ. ಲಿಕ್ಕರ್ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆದಿರುತ್ತಾರೆ. ಅದನ್ನು ಜನರು ಓದಬೇಕು. ಮದ್ಯ ಸೇವನೆ ಮಾಡಬಾರದು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net