ಸಿದ್ದರಾಮಯ್ಯ 10 ವರ್ಷನೂ ಸಿಎಂ : ಸಚಿವ ಕೆ.ಜೆ. ಜಾರ್ಜ್

K J George
Published on

ಮೈಸೂರು: ಸಿದ್ದರಾಮಯ್ಯಗೆ ಜನ ಬೆಂಬಲ ಇದೆ, ಅವರು ಮುಖ್ಯಮಂತ್ರಿಯಾಗಿ 5 ವರ್ಷವೂ ಇರಬಹುದು, 10 ವರ್ಷವೂ ಇರಬಹುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸಿದ್ದರಾಮಯ್ಯ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ನೀವೇ (ಮಾಧ್ಯಮ) ಟೈಂ ಫಿಕ್ಸ್ ಮಾಡಿದ್ದೀರಾ, ಈಗ ಜೂನ್ ತಿಂಗಳು, ನವೆಂಬರ್ ಬರಲಿ ಅಂದು ಮಾತನಾಡುತ್ತೇನೆ ಎಂದರು.

ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಸರ್ಕಾರದ ಮೇಲೆ ಇದೆ. ಯಾವ ವಿಚಾರ ಯಾವಾಗ ತೀರ್ಮಾನ ಮಾಡಬೇಕೆಂದು ಹೈಕಮಾಂಡ್‌ಗೆ ಗೊತ್ತಿದೆ. ಹೈಕಮಾಂಡ್ ವಿಚಾರವನ್ನು ನಾನು ಹೇಗೆ ಮಾತನಾಡಲಿ. 5 ವರ್ಷವೂ ಕಾಂಗ್ರೆಸ್ ಸರ್ಕಾರ ಇರುತ್ತದೆ. ಈ ವಿಚಾರದ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ ನನ್ನನ್ನು ಸಿಲುಕಿಸುವ ಯತ್ನ ಮಾಡಬೇಡಿ. ನೀವು ಪ್ರಶ್ನೆ ಕೇಳಿದ್ದೀರಾ ನಾನು ಉತ್ತರ ಕೊಟ್ಟಿದ್ದೇನೆ, ಪ್ರಶ್ನೆ ನಿಮ್ಮದು ಉತ್ತರ ನನ್ನದು. ನನ್ನದೇ ಪ್ರಶ್ನೆ ನನ್ನದೇ ಉತ್ತರ ಎಂಬ ರೀತಿಯಲ್ಲಿ ತೋರಿಸಬೇಡಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net