ಸಿದ್ದರಾಮಯ್ಯಗೆ ಬೇಕಿರುವುದು ಕೇಸರಿ ಅಥವಾ ಹಸಿರೋ ?

bjp protest in shivamogga
ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಚರ್ಚೆ ನಡೆಸಿದರು.
Published on

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಯಲ್ಲಿ ಹರಿಯುತ್ತಿರುವುದು ಹಸಿರು ರಕ್ತವೋ ಅಥವಾ ಹಿಂದು ರಕ್ತ ಹರಿಯುತ್ತಿದೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು. ಹಸಿರು ಬೇಕೋ ಅಥವಾ ಕೇಸರಿ ಬೇಕೋ ಎಂಬುದನ್ನು ಅವರೇ ನಿರ್ಧರಿಸಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆ ಖಂಡಿಸಿ ಮತ್ತು ಕಾಂಗ್ರೆಸ್‌ನ ಹಿಂದು ವಿರೋಧಿ ನೀತಿ ವಿರೋಧಿಸಿ ಜಿಲ್ಲಾ ಬಿಜೆಪಿಯಿಂದ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿ ಗುರುವಾರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಮೊದಲು ದೇವಸ್ಥಾನಗಳಿಗೆ ಹೋಗುತ್ತಿರಲಿಲ್ಲ. ಹಣೆಗೆ ತಿಲಕ ಇಡುತ್ತಿರಲಿಲ್ಲ. ಈಗ ಕದ್ದು ಮುಚ್ಚಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ತಿಲಕ ಇಡುತ್ತಿದ್ದಾರೆ. ಹೀಗೆ ಮಾಡಿದರೆ ಅವರನ್ನು ಹೇಡಿ ಹಿಂದು ಎಂದು ಕರೆಯುತ್ತಾರೆ ಎಂದು ಲೇವಡಿ ಮಾಡಿದರು.
ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ಒಬ್ಬರಿಗೆ ಒಂದೇ ಹೆಂಡತಿ, ಇಬ್ಬರೇ ಮಕ್ಕಳು ಇರಬೇಕಾಗುತ್ತದೆ. ಇದು ಗೊತ್ತಾಗಿಯೇ ಕಾಂಗ್ರೆಸ್ ಈಗಲೇ ವಿರೋಧ ಮಾಡುತ್ತಿದೆ. ಹಮ್ ದೋ-ಹಮಾರೆ ದೋ ಎಂಬುದು ಹಿಂದುಗಳ ನಿಲುವಾದರೆ, ಹಮ್ ಪಾಂಚ್-ಹಮಾರೆ ಪಚ್ಚೀಸ್ ಎಂಬ ನೀತಿ ಮುಸ್ಲಿಮರದ್ದು. ಇದು ಇನ್ಮುಂದೆ ನಡೆಯಲ್ಲ. ದೇಶದ ಕಾನೂನಿಗೆ ಬೆಲೆ ಕೊಡುವವರು ಮಾತ್ರ ಇಲ್ಲಿ ಇರಬಹುದು. ಇಲ್ಲವಾದರೆ ದೇಶ ಬಿಡಬಹುದು ಎಂದು ಎಚ್ಚರಿಸಿದರು.
ಎಂಎಲ್‌ಸಿ ಡಿ.ಎಸ್.ಅರುಣ್, ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ದರಾಮಣ್ಣ, ವಿಭಾಗ ಪ್ರಭಾರಿ ಗಿರೀಶ್ ಪಟೇಲ್, ಪ್ರಮುಖರಾದ ಎಸ್.ಎಸ್.ಜ್ಯೋತಿಪ್ರಕಾಶ್, ಎಸ್.ಜ್ಞಾನೇಶ್ವರ್, ಎಸ್.ಟಿ.ಬಳಿಗಾರ್, ಎಸ್.ದತ್ತಾತ್ರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net