ಎಷ್ಟು ಆಸ್ಪತ್ರೆಗಳಿಗೆ ಹೋಗಿ ಜನರನ್ನು ಸಂತೈಸಿದ್ದೀರಿ: ಸಿದ್ದರಾಮಯ್ಯಗೆ ಬೈರತಿ ಟಾಂಗ್

siddu bairathi
Published on

ಹಾವೇರಿ: ಕರೊನಾ ಹಾವಳಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹರಡುತ್ತಿರುವಾಗಲೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವುದಾದರೂ ಆಸ್ಪತ್ರೆಗೆ ಭೇಟಿ ಕೊಟ್ಟು ಸಂತ್ರಸ್ತರಿಗೆ ಸಮಾಧಾನ ಹೇಳಿದ್ದಾರಾ ಎಂದು ಅವರ ಮಾಜಿ ಶಿಷ್ಯ, ಹಾಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪ್ರಶ್ನಿಸಿದ್ದಾರೆ.

‘‘ಸಿದ್ದರಾಮಯ್ಯ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದಾರೆ. ಆ ಸ್ಥಾನದ ಜವಾಬ್ದಾರಿಯನ್ನು ತೆಗೆದುಕೊಂಡು ನಿರ್ವಹಣೆ ಮಾಡಿದ್ದಾರೆಯೇ? ಯಾವುದಾದರೂ ಕೋವಿಡ್-19 ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆಯೇ? ಮನೆಯಲ್ಲಿ ಆರಾಮವಾಗಿದ್ದುಕೊಂಡು, ವಿರೋಧ ಪಕ್ಷದವರಾಗಿ ಸರ್ಕಾರದ ವಿರುದ್ಧ ಏನು ಹೇಳಬೇಕೋ ಅದನ್ನು ಹೇಳುತ್ತಿದ್ದಾರೆ ಅಷ್ಟೇ’’ ಎಂದು ಸುದ್ದಿಗಾರರ ಎದುರು ಟೀಕಿಸಿದರು. ಇದನ್ನೂ ಓದಿರಿ ಇಡೀ ರಾಜ್ಯ ಮತ್ತೆ ಸ್ತಬ್ಧ! ವೀಕೆಂಡ್​ ಲಾಕ್​ಡೌನ್​ಗೆ ಕ್ಷಣಗಣನೆ

‘‘ಕೋವಿಡ್-19ಗೆ ಮೀಸಲಾದ ಹಣ ದುರ್ಬಳಕೆಯಾಗಿದೆ ಎಂಬುದಾಗಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದರ ಬಗ್ಗೆ ಈಗಾಗಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಸಿದ್ದರಾಮಯ್ಯ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಯಾವ ಕಂಪನಿಯಲ್ಲಿ ಏನಾಗಿದೆ ಎಂಬುದನ್ನು ಆಧಾರ ಸಮೇತ ಸಾಬೀತುಪಡಿಸಲಿ’’ ಎಂದು ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net