ಅಲ್ಪಸಂಖ್ಯಾತರ ಚಾಂಪಿಯನ್ ಆಗಲು ಹೊರಟ ಸಿದ್ದರಾಮಯ್ಯ

ex dcm k.s.eshwarappa
Published on

ಶಿವಮೊಗ್ಗ: ಜಾತಿಗಣತಿ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದುಳಿದ, ದಲಿತರು, ಅಲ್ಪಸಂಖ್ಯಾತರ ಚಾಂಪಿಯನ್ ಆಗಲು ಹೊರಟಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ದೂರಿದರು.

ಒಂದು ಕಾಲದಲ್ಲಿ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಕೂಡ ಬಗ್ಗಿತ್ತು. ಆದರೆ ಇಂದು ಶಕ್ತಿಹೀನರಾಗಿದ್ದಾರೆ. ಕಾಂತರಾಜ ವರದಿ ಜಾರಿ ಮಾಡುವುದಾಗಿ ಹೇಳಿಕೊಂಡು ಬಂದಿದ್ದ ಅವರು, ಅಂತಿಮವಾಗಿ ಹೈಕಮಾಂಡ್ ನಿರ್ದೇಶನದಂತೆ 90 ದಿನದಲ್ಲಿ ಮತ್ತೆ ಹಿಂದುಳಿದವರ ಹೊಸ ಗಣತಿ ಮಾಡಿಸಿದರು. 160 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿದ್ದ ಕಾಂತರಾಜ್ ವರದಿಗೆ ಬೆಂಕಿ ಹಚ್ಚಿ ಸಿಎಂ ಖುರ್ಚಿ ಉಳಿಸಿಕೊಂಡರು ಎಂದರು.

ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿರುವ ಕಡೆ ಇವಿಎಂ ಸರಿ ಇದೆ. ಸೋತಿರುವ ಕಡೆಗಳಲ್ಲಿ ಮತಯಂತ್ರ ಸರಿ ಇಲ್ಲ ಎಂದರೆ ಏನರ್ಥ ಎಂದು ಈಶ್ವರಪ್ಪ ಪ್ರಶ್ನಿಸಿದರು. ಆಳಂದದಲ್ಲಿ 6 ಸಾವಿರ ಮತ ಕಳವು ಆಗಿದೆ ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಕಾಂಗ್ರೆಸ್‌ನ ಭಂಡತನ. ಮತಗಳವು ಶಂಕೆ ಇದ್ದರೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net