

ಗುಳೇದಗುಡ್ಡ: ರಾಜ್ಯದ ಸಮಗ್ರ ಅಭಿವೃದ್ಧಿಗೆ, ಬಡವರ ಏಳಿಗೆಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮ್ಯನವರು ಇನ್ನೂ ನೂರ‌್ಕಾಲ ಬಾಳಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ. ಸದಾಕಾಲ ದೇವರ ಆಶೀರ್ವಾದ ಸಿದ್ದರಾಮಯ್ಯನವರ ಮೇಲಿರಲಿ ಎಂದು ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನದ ಅಂಗವಾಗಿ ಪಟ್ಟಣದ ನೆಹರು ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಗುರುವಾರ ಬಾಗಲಕೋಟೆಯ ಬನಶಂಕರಿ ಬ್ಲಡ್ ಬ್ಯಾಂಕ್ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಕಾರ್ಯಕ್ರಮದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜನಾಂಗದ ನಾಯಕ, ಅಭಿವೃದ್ಧಿ ಭಾಗ್ಯಗಳನ್ನು ನೀಡಿದ ಸರದಾರ, ಐದು ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದ ನಾಯಕ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 76ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅವರ ಅಭಿಮಾನಗಳಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಬಾದಾಮಿ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿದೆ ಎಂದರು.
ಮಹಿಬೂಬ್ ಕಾಂಟ್ರಾಕ್ಟರ್, ರಂಗಪ್ಪ ರಂಗನ್ನವರ, ಶರಣು ಸಜ್ಜನ, ಚಂದ್ರು ಪಟ್ಟಣಶೆಟ್ಟಿ, ಪ್ರದೀಪ ಕಾಂಚಾಣಿ, ಮಂಜುನಾಥ ಬಳಗಲಿ, ಶಂಕರ ರಂಜಣಗಿ, ಬಸವರಾಜ ಜಂಗಮರ, ವಿಠ್ಠಲಸಾ ಕಾವಡೆ, ಸಾಗರ ಕೊಣ್ಣೂರ, ಪ್ರಕಾಶಗೌಡ, ಸುಭಾಷ ಗುರುಶಾಂತನವರ, ಜೆಟ್ಟೆಪ್ಪ ಗೌಡರ, ತಿಮ್ಮಣ್ಣ ಬಂಡಿವಡ್ಡರ, ಶಿವು ಜಡಿ ಇತರರಿದ್ದರು.