ಸುಳ್ಯ: ಮುಡಾ ಪ್ರಕರಣದಲ್ಲಿ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಂಡಲ ಸಮಿತಿ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ ಮಾತನಾಡಿ, ಸಿದ್ದರಾಮಯ್ಯ ಅಧಿಕಾರ ಪಡೆಯುವ, ದುಡ್ಡು ಮಾಡುವ ಲೆಕ್ಕಾಚಾರದಲ್ಲಿ ಇದ್ದಾರೆ. ಅವರಿಗೆ ರಾಜ್ಯದ ಹಿತಾಸಕ್ತಿ ಇಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಕೊನೆಗೊಳ್ಳಬೇಕು ಎಂಬುದು ಜನರ ಒತ್ತಾಯ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದರು.
ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ ಮಾತನಾಡಿ, ಬೇರೆಯವರು ಬೇರೆ ಕೇಸಲ್ಲಿ ಬಿದ್ದಾಗ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಸಿದ್ದರಾಮಯ್ಯನವರಿಗೆ ಈಗ ರಾಜೀನಾಮೆ ನೀಡಲು ಯಾಕೆ ಆಗುತ್ತಿಲ್ಲ? 14 ಸೈಟ್ ಪಡೆದುಕೊಂಡು ನಾನು ಏನೂ ಮಾಡಿಲ್ಲ. ನಾನೇ ಪ್ರಾಮಾಣಿಕ ಎಂದು ಬಿಂಬಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರದಲ್ಲಿರುವ ನೈತಿಕತೆ ಇಲ್ಲ ಎಂದರು.
ಹರೀಶ್ ಬೂಡುಪನ್ನೆ, ನ.ಪಂ ಅಧ್ಯಕ್ಷೆ ಶಶಿಕಲಾ, ಪ್ರಮುಖರಾದ ಬುದ್ಧ ನಾಯ್ಕ, ಚನಿಯ ಕಲ್ತಡ್ಕ, ಬೂಡು ರಾಧಾಕೃಷ್ಣ ರೈ, ಸೋಮಶೇಖರ್ ಪೈಕ, ಜಗದೀಶ್, ಬಾಲಗೋಪಾಲ್, ರಮೇಶ್ ಇರಂತಮಜಲು, ನಾರಾಯಣ ಶಾಂತಿನಗರ, ಶೀಲಾ ಕುರುಂಜಿ, ಪಿ.ಕೆ.ಉಮೇಶ್, ಮಹೇಶ್ ರೈ ಮೇನಾಲ, ಶಂಕರ್ ಪೆರಾಜೆ, ಜಿನ್ನಪ್ಪ ಪೂಜಾರಿ, ಚಂದ್ರಶೇಖರ, ಸುನೀಲ್ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಶಾಂತಿನಗರ ನಿರೂಪಿಸಿದರು. ಹೇಮಂತ್ ಕುಮಾರ್ ಕಂದಡ್ಕ ವಂದಿಸಿದರು.