ಸಿದ್ದರಾಮಯ್ಯ ಕರ್ನಾಟಕ ಪಕ್ಷಾಂತರ ಪ್ರವೀಣ !

ishwarappa
ಮಾಜಿ ಡಿಸಿಎಂ ಈಶ್ವರಪ್ಪ
Published on

ಬಾಗಲಕೋಟೆ:ಕರ್ನಾಟಕದಲ್ಲಿ ಪಕ್ಷಾಂತರ ಪ್ರವೀಣ ಎಂದರೆ ಅದು ಸಿದ್ದರಾಮಯ್ಯ. ಅವರಿಗೆ ಶಾಸಕರ ಪಕ್ಷಾಂತರದ ಬಗ್ಗೆ ಮಾತನಾಡುವ ಅಧಿಕಾರವೇ ಇಲ್ಲ ಎಂದು ಮಾಜಿ ಡಿಸಿಎಂ ಈಶ್ವರಪ್ಪ ಛೇಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿದ ಈಶ್ವರಪ್ಪ, ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗುತ್ತಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದವರು ಇದೇ ಸಿದ್ದರಾಮಯ್ಯ ಎಂದರು.

ಲೋಕಸಭಾ ಚುನಾವಣೆ ಸಮೀಕ್ಷೆ ಬಂದ ಬಳಿಕ ಅವರಿಬ್ಬರೂ(ಸಿದ್ದರಾಮಯ್ಯ, ಡಿಕೆಶಿ) ನಿದ್ದೆ ಮಾಡುತ್ತಿಲ್ಲ. ಲೋಕಸಭೆಯಲ್ಲಿ ಬಿಜೆಪಿ 23 ಸೀಟು ಬರುತ್ತಿದ್ದಂತೆ ಈ ಸರ್ಕಾರ ಇರುತ್ತಾ ? ನಾವು ಕರಿಯೋದೆ ಬೇಡ, ಕಾಂಗ್ರೆಸ್‌ನವರು ದಿಕ್ಕು ದಿಕ್ಕು ಹಾರಕೋಂತ ಹೋಗುತ್ತಾರೆ ಎಂದು ಲೇವಡಿ ಮಾಡಿದರು.

ಈಶ್ವರಪ್ಪ ವಿವಾದಾತ್ಮಕ ಕೈಸನ್ನೆ !
ಬಾಗಲಕೋಟೆಯಲ್ಲಿ ಜಿಲ್ಲಾಡಳಿತದಿಂದ ಶಿವಾಜಿ ಮೂರ್ತಿ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿವಾದಾತ್ಮಕವಾಗಿ ಕೈ ಸನ್ನೆ ಮಾಡಿದರು. ಛತ್ರಪತಿ ಶಿವಾಜಿ ಇರಲಿಲ್ಲ ಎಂದಿದ್ದರೆ ನಾವು ನೀವು ಈ ದೇಶದಲ್ಲಿ ಹಿಂದುಗಳಾಗಿ ಇರೋಕೆ ಆಗುತ್ತಿರಲಿಲ್ಲ. ಎಲ್ಲ ಕಟ್ ಆಗಿ ಹೋಗುತ್ತಿತ್ತು ಎಂದು ಕೈಸನ್ನೆ ಮಾಡಿ ತೋರಿಸಿದರು. ಈ ಬಗ್ಗೆ ಯಾರಾದರೂ ನನ್ನ ಮೇಲೆ ಕೇಸ್ ಹಾಕಲಿ. ಶಿವಾಜಿ ಮಹಾರಾಜರು ಇಲ್ಲದಿದ್ದರೆ ಎಲ್ಲ ಪೀಸ್ ಪೀಸ್ ಮಾಡಿಟ್ಟಿರೋರು. ಛತ್ರಪತಿ ಶಿವಾಜಿ ಮಹಾರಾಜರು ದೇಶದಲ್ಲಿ ಇದ್ದಿದ್ದರಿಂದ ನಾವೆಲ್ಲ ಹಿಂದುಗಳು ಉಳಿದಿದ್ದೇವೆ ಎಂದರು.

ಶಿವಾಜಿ ಮೂರ್ತಿ ತೆರವು ಬಾಗಲಕೋಟೆ ಜಿಲ್ಲೆಗೆ ಮಾಡಿದ ಅವಮಾನ ಮಾತ್ರವಲ್ಲ. ಇಡೀ ಹಿಂದು ಸಮಾಜಕ್ಕೆ ಮಾಡಿದ ಅವಮಾನ. ಅನುಭವಿಸ್ತಾರೆ, ಅನುಭವಿಸಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net