ಸಮರ್ಥ ಆಡಳಿತಗಾರ ಸಿದ್ದರಾಮಯ್ಯ

3 ಎಸ್ಕೆಪಿ_2
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ದಿನದ ನಿಮಿತ್ತ ಶಿಕಾರಿಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಿಸಲಾಯಿತು. ಹುಲ್ಮಾರ್ ಮಹೇಶ್, ಉಳ್ಳಿ ದರ್ಶನ್, ಅಸ್ಲಂ ಬಾಷಾ, ಗೋಣಿ ಪ್ರಕಾಶ್, ಗುಡ್ಡಳ್ಳಿ ಸುರೇಶ್, ವೇಣುಗೋಪಾಲ್ ಇತರರಿದ್ದರು.
Published on

ಶಿಕಾರಿಪುರ: ದೇವರಾಜ ಅರಸು ಅವರ ನಂತರ ಅತ್ಯಂತ ಜನಪರ, ಸಾಮಾಜಿಕ ನ್ಯಾಯ ಮತ್ತು ಬಡವರ ಹಿತ ಕಾಯುವ ಮುಖ್ಯಮಂತ್ರಿ ಎಂದರೆ ಅದು ಸಿದ್ದರಾಮಯ್ಯ ಮಾತ್ರ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್ ಹೇಳಿದರು.

ಗುರುವಾರ ಬ್ಲಾಕ್ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನದ ನಿಮಿತ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರಿಯ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಮರ್ಥ ಆಡಳಿತ ನಡೆಸಿದ್ದರ ಪರಿಣಾಮ ಮತ್ತು ಕರ್ನಾಟಕ ಜನತೆ ಅವರ ಮೇಲಿಟ್ಟಿರುವ ನಂಬಿಕೆಯಿಂದಾಗಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತಂದಿದ್ದಾರೆ. ಬಡವರ ಹಿತ ಕಾಯುವ, ನುಡಿದಂತೆ ನಡೆಯುವ ಮುಖ್ಯಮಂತ್ರಿಯಾಗಿದ್ದು ಚುನಾವಣೆಯಲ್ಲಿ ನೀಡಿದ್ದ ಐದು ಗ್ಯಾರಂಟಿ ಭರವಸೆಗಳಲ್ಲಿ ನಾಲ್ಕನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದರು.
ಜಿಲ್ಲಾ ಕಾರ್ಯದರ್ಶಿ ಉಳ್ಳಿ ದರ್ಶನ್, ಅಸ್ಲಂ ಬಾಷಾ, ಭಂಡಾರಿ ಮಾಲತೇಶ್, ಗೋಣಿ ಪ್ರಕಾಶ್, ಗುಡ್ಡಳ್ಳಿ ಸುರೇಶ್, ಬಡಗಿ ಪಾಲಾಕ್ಷಪ್ಪ, ಶ್ರೀಕಾಂತ್, ಬಿ.ಸಿ.ವೇಣುಗೋಪಾಲ್, ನಾಗರಾಜ ನಾಯ್ಕ, ಮಂಜುನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net