

ಮಹಾಲಿಂಗಪುರ: ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದಲ್ಲಿ ಗ್ಯಾರಂಟಿಗಳನ್ನು ತಪ್ಪದೇ ಜಾರಿಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಮುಖಂಡ ಸಿದ್ದು ಕೊಣ್ಣೂರ ಹೇಳಿದರು.
ಸೋಮವಾರ ಸಂಜೆ ಸ್ಥಳೀಯ ಸಾಧುನ ಗುಡಿ ಬಡಾವಣೆಯ 10 ಮತ್ತು 11 ನೇ ವಾರ್ಡಿನ ಮಹಿಳೆಯರಿಗೆ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತನಾಡಿದ ಅವರು ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಅಕಾರಕ್ಕೆ ಬಂದರೆ ಬಡವರ ಬದುಕು ಬಂಗಾರವಾಗಲಿದೆ, ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ಗೆ ಮತ ನೀಡಿ ಸಂಯುಕ್ತ ಪಾಟೀಲರನ್ನು ಬಹುಮತದಿಂದ ಗೆಲ್ಲಿಸಿ ಎಂದು ಮನಿ ಮಾಡಿದರು. ಕಾಂಗ್ರೆಸ್ ಮುಖಂಡರಾದ ಶಂಕರ ಮುಗಳಖೋಡ, ಸುನಿಲ ಬನಹಟ್ಟಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಈಶ್ವರ ಚಮಕೇರಿ,ಮುಖಂಡರಾದ ಬಲವಂತಗೌಡ ಪಾಟೀಲ, ಹನಮಂತ ಬಂಡಿವಡ್ಡರ, ಲಕ್ಕಪ್ಪ ಭಜಂತ್ರಿ, ಮೋಹಸಿನ್ ನದಾ, ಮಾರುತಿ ಗಾಡಿವಡ್ಡರ, ಜಬೀವುಲ್ಲಾ ಮುಲ್ಲಾ, ಶಂಕರ ಚನ್ನದಾಸರ, ಮಹ್ಮದ್ ಮಕಾನದಾರ ಮುಂತಾದರು ಇದ್ದರು.