ಅಹಿಂದ ವರ್ಗ ಮರೆತ ಸಿದ್ದರಾಮಯ್ಯ

1
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​, ವೈ.ಎಚ್​.ಹುಚ್ಚಯ್ಯ, ಎಸ್​.ಶಿವಪ್ರಸಾದ್​, ಬ್ಯಾಟರಂಗೇಗೌಡ, ಕೆ.ವೇದಮೂರ್ತಿ, ಬ್ಯಾಟರಂಗೇಗೌಡ, ಬನಶಂಕರಿ ಬಾಬು, ಬಿ.ಚಂದ್ರಬಾಬು, ಹನುಮಂತರಾಜು, ಚೇತನ್​ ಇದ್ದರು.
Published on

ಜನರಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ರಾಜ್ಯ ಸರ್ಕಾರ ವಿಲವಾಗಿದೆ ಎಂದ ಬಿಜೆಪಿ

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ದೇವರಾಜ ಅರಸು ಅಭಿವೃದ್ಧಿ ನಿಗಮವು ಸೇರಿ ವಿವಿಧ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡದೆ ಈ ವರ್ಗದ ಜನರಲ್ಲಿ ಆರ್ಥಿಕ ಶಕ್ತಿ ತುಂಬುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟಿಸಲಾಯಿತು.

ನಗರದ ಟೌನ್​ಹಾಲ್​ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೇರಿರುವ ಸಿಎಂ ಸಿದ್ದರಾಮಯ್ಯ ಆ ವರ್ಗವನ್ನೇ ಮರೆತಿದ್ದಾರೆ. ಅಹಿಂದ ಚಾಂಪಿಯನ್​ ಈ ಹಿಂದಿನ ಬಿಜೆಪಿ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿ ಹಿಂದುಳಿದವರ ಹಿತವನ್ನು ಮರೆತಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ರವಿಶಂಕರ್​, ಸಿಎಂ ಸಿದ್ದರಾಮಯ್ಯ ಸರ್ಕಾರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಎಲ್ಲ ಕ್ಷೇತ್ರಗಳಲ್ಲು ವಿಫಲವಾಗಿದೆ. ಹಿಂದುಳಿದ ವರ್ಗದ ಜನರ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ, ಕೃಷಿ ಅನುದಾನ ಬಿಡುಗಡೆ ಮಾಡದೆ ಅನ್ಯಾಯ ಮಾಡಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಹಿಂದುಳಿದವರ ಅಭಿವೃದ್ಧಿಗಾಗಿ 1 ಸಾವಿರ ಕೋಟಿ ರೂಪಾಯಿಗಳನ್ನು ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ, ಕಾಂಗ್ರೆಸ್​ ಸರ್ಕಾರ ಘೋಷಿಸಿದ್ದ 1500 ಕೋಟಿ ರೂ., ಗಳಲ್ಲಿ ಕೇವಲ 170 ಕೋಟಿ ರೂ.,

ಬಿಡುಗಡೆ ಮಾಡಿದೆ ಎಂದು ಆರೋಪಿಸಿದರು.

ದೇವರಾಜ ಅರಸು ನಂತರ ತಾವೇ ಹಿಂದುಳಿದ ಚಾಂಪಿಯನ್​ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು, ಯಾವುದೇ ಪ್ರಾತಿನಿಧ್ಯ ಸಿಗದ ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮುದಾಯಗಳ ಜನರಲ್ಲಿ ಆರ್ಥಿಕ ಶಕ್ತಿ ತುಂಬುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ರಾಜಕೀಯ ಸ್ವಾರ್ಥಕ್ಕಾಗಿ ಸಿದ್ದರಾಮಯ್ಯ ಅಹಿಂದ ಮಂತ್ರ ಜಪಿಸುತ್ತಿದ್ದಾರೆ. ಈ ಸಮುದಾಯಗಳ ಕಲ್ಯಾಣಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ರೈತ ಮೋರ್ಚಾ ಮುಖಂಡ ಎಸ್​.ಶಿವಪ್ರಸಾದ್​ ತರಾಟೆಗೆ ತೆಗೆದುಕೊಂಡರು.

ಪರಿಶಿಷ್ಟ ಜಾತಿ-ವರ್ಗದ ನಿಗಮಗಳ ಹಣವನ್ನು ತೆಗೆದುಕೊಂಡು ಅನ್ಯ ಉದ್ದೇಶಕ್ಕೆ ಬಳಸಿ ಆ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್​ ಸರ್ಕಾರ ಸ್ಥಗಿತಗೊಳಿಸಿದೆ. ನೈತಿಕವಾಗಿ ದಿವಾಳಿಯಾಗಿರುವ ಕಾಂಗ್ರೆಸ್​ ಸರ್ಕಾರ ರಾಜಕೀಯವಾಗಿಯೂ

ದಿವಾಳಿಯಾಗಿದೆ ಎಂದರು.

ನಿಗಮಗಳನ್ನು ಮುಚ್ಚಲಿ

ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಸ್ಥಾಪಿಸಿರುವ ಅಭಿವೃದ್ಧಿ ನಿಗಮಗಳಿಗೆ ಕಾಂಗ್ರೆಸ್​ ಸರ್ಕಾರ ಅನುದಾನ ಬಿಡುಗಡೆ ಮಾಡದೆ ರ್ನಿಲಕ್ಷ$್ಯ ಮಾಡಿದೆ. ನಿಗಮಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಲಿ ಇಲ್ಲವೆ ಎಲ್ಲ ನಿಗಮಗಳನ್ನು ಮುಚ್ಚಿಬಿಡಲಿ ಎಂದು ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ವೇದಮೂರ್ತಿ ಬೇಸರಿಸಿದರು.ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಒಬಿಸಿ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಬನಶಂಕರಿ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಬಾಬು, ಬಿಜೆಪಿ ನಗರಾಧ್ಯಕ್ಷ ಟಿ.ಎಚ್​.ಹನುಮಂತರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಬಿ.ಎಚ್​.ಚೇತನ್​, ನಗರಪಾಲಿಕೆ ಮಾಜಿ ಸದಸ್ಯರಾದ ವಿಷ್ಣುವರ್ಧನ್​, ಎಚ್​.ಮಲ್ಲಿಕಾರ್ಜುನಯ್ಯ, ಸತ್ಯಮಂಗಲ ಜಗದೀಶ್​, ಜೆಡಿಎಸ್​ ಮುಖಂಡ ಶ್ರೀನಿವಾಸಪ್ರಸಾದ್​, ಮುಖಂಡರಾದ ಶಂಕರ್​, ನಂಜೇಗೌಡ, ಜೆ.ಜಗದೀಶ್​, ಬಂಬೂ ಮೋಹನ್​, ನಿಸರ್ಗ ರಮೇಶ್​, ನಾಗರತ್ನಮ್ಮ, ಜ್ಯೋತಿ ತಿಪ್ಪೇಸ್ವಾಮಿ, ಕಟ್​ವೆಲ್​ ರಂಗನಾಥ್​, ಕೆ.ಎಂ.ಶಿವಕುಮಾರ್​, ಗಿರೀಶ್​, ಹರೀಶ್​ ಮತ್ತಿತರರು ಪಾಲ್ಗೊಂಡಿದ್ದರು.

ಹಿಂದುಳಿದ ವರ್ಗಕ್ಕೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಮಾಡಿಕೊಡಿ, ವ್ಯವಸ್ಥೆಯನ್ನು ಹಾಳು ಮಾಡಬೇಡಿ. ನಿಗಮಗಳ ಹಣವನ್ನು ಕಾಂಗ್ರೆಸ್​ ಚುನಾವಣೆಗೆ ಬಳಸಿಕೊಂಡಿದ್ದು, ಜನರ ಹಿತಕ್ಕಿಂಥಾ ಚುನಾವಣೆ ಗೆಲ್ಲುವುದೇ ಮುಖ್ಯ. - ಎಚ್​.ಎಸ್​.ರವಿಶಂಕರ್​ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಅರಸು ನಂತರ ಹಿಂದುಳಿದ ವರ್ಗದಲ್ಲಿ ದೊಡ್ಡ ಬದಲಾವಣೆಯನ್ನು ಸಿಎಂ ಸಿದ್ದರಾಮಯ್ಯ ತರುತ್ತಾರೆ ಎಂಬ ನಿರೀಕ್ಷೆ ಇತ್ತು. ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲೇ ಮುಖವಾಡ ಕಳಚಿಬಿದ್ದಿದೆ. ಹಿಂದುಳಿದ ವರ್ಗಗಳ ನಿಗಮಗಳಿಗೆ ಸಿದ್ದರಾಮಯ್ಯ ಸರ್ಕಾರ 1500 ಕೋಟಿ ರೂ., ಅನುದಾನ ಘೋಷಿಸಿ ಬಿಡುಗಡೆ ಮಾಡಿರುವುದು ಕೇವಲ 170 ಕೋಟಿ ರೂ., ನೀಡಿದೆ. ಅನುದಾನವನ್ನೆಲ್ಲ ಗ್ಯಾರಂಟಿ ಯೋಜನೆಗಳ ಪಾಲಾಗಿದೆ. - ವೈ.ಎಚ್​.ಹುಚ್ಚಯ್ಯ ಉಪಾಧ್ಯಕ್ಷ, ಬಿಜೆಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net