ಸದ್ಯಕ್ಕೆ ಸಿದ್ದರಾಮಯ್ಯ ಸರ್ಕಾರಕ್ಕೆ ಆತಂಕ ಇಲ್ಲ

IMG20251003182355.jpg
Published on

ಧಾರವಾಡ: ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸುರಕ್ಷಿತವಾಗಿದ್ದು, ಯಾವುದೇ ಆತಂಕ ಇಲ್ಲ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸರ್ಕಾರಕ್ಕೆ ಭಯವಿಲ್ಲ. ಉಳಿದಿದ್ದು ಸಂಕ್ರಾಂತಿ ನಂತರ ಸ್ಥಿತಿಗತಿ ನೋಡಿ ಹೇಳುತ್ತೇನೆ ಎಂದರು. ಬಯಲು ಸೀಮೆಯಲ್ಲಿ ಮಲೆನಾಡು ಮಳೆ ಎಂದು ಈ ಹಿಂದೆ ಹೇಳಿದ್ದೆ. ಅದೇ ರೀತಿ ಮಳೆಯೂ ಆಗುತ್ತಿದೆ ಎಂದರು. ದೇಶದಲ್ಲಿ ದಸರಾ ಹಬ್ಬದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಹಬ್ಬದ ನಿಜವಾದ ಅರ್ಥ ಏನೆಂದರೆ, ದುಷ್ಟ ಶಕ್ತಿ ಹೋಗಬೇಕು. ಮನುಷ್ಯನಿಗೆ ಶಾಂತಿ- ಸುಖ, ನೆಮ್ಮದಿ ಬೇಕು. ಅದೇ ದೃಷ್ಟಿಯಿಂದ ಇವೆಲ್ಲ ಆಚರಣೆಗಳಿವೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತ ಎಂದು ಸ್ವಾಮೀಜಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net