ಸಿದ್ದು ಸಿಎಂ ಆಗಲಿ ಎಂದು ಹರಕೆ ತೀರಿಸಿದ ಅಭಿಮಾನಿ...!

Siddaramaiah
Published on

ಬಳ್ಳಾರಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದೆ.ಈಗಿನಿಂದಲೇ ಕೆಲ ರಾಜಕಾರಣಿಗಳ ಬೆಂಬಲಿಗರು ತಮ್ಮ ಮುಖಂಡರೇ ಮುಂದಿನ ಭಾರಿ ಅಧಿಕಾರ ವಹಿಸಿಕೊಳ್ಳಲಿ ಎಂದು ಇಚ್ಚೆ ಪಡುವುದರ ಹೊರತಾಗಿ ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳಿಂದ ವಿಶೇಷ ಹರಕೆಯೊಂದು ಹೊರ ಬಿದ್ದಿದೆ.

ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಅಂತಾ ರಥೋತ್ಸವದ ವೇಳೆ ಬಾಳೆಹಣ್ಣು ಎಸೆದು ಅವರ ಅಭಿಮಾನಿಗಳು ಹರಕೆ ತಿರಿಸಿದ್ದಾರೆ.

ಬಳ್ಳಾರಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ಶನವಾರ ಆಯೋಜಿಸಿದ್ದ ಗಾದಿಲಿಂಗೇಶ್ವರ ರಥೋತ್ಸವ ವೇಳೆ ಬಾಳೆ ಹಣ್ಣಿನ ಮೇಲೆ Next CM ಸಿದ್ದರಾಮಯ್ಯ ಎಂದು ಬರೆದು ಗಾಧಿಲಿಂಗೆಶ್ವರ ರಥೋತ್ಸವ ದಲ್ಲಿ ಬಾಳೆ ಹಣ್ಣನ್ನು ಸಿದ್ದು ಅಭಿಮಾನಿ ವೀರೇಶ್ ಎಂಬುವವರು ಎಸೆದಿದ್ದಾರೆ.

ಒಟ್ಟಾರೆ, ಈಗಿನಿಂದಲೇ ಅಭಿಮಾನಿಗಳಿಂದ ಸಿದ್ದು ಸಿಎಂ ಆಗುವಂತೆ ಹರಕೆ ತಿರಿಸಲಾಗುತ್ತಿದ್ದು, ಸಿದ್ದು ಬಾಳೆ ಹಣ್ಣಿನ ಮೂಲಕ ದೇವರಿಗೆ ಹರಕೆ ತೀರಿಸಿರುವ ಅಭಿಮಾನಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net