1ರಂದು ಆನೆಅಂಬಾರಿಸಹಿತ ತುಲಾಭಾರ, ಸಿದ್ಧತೆ ಪರಿಶೀಲಿಸಿದ ಶ್ರೀಫಕೀರ ದಿಂಗಾಲೇಶ್ವರ ಸ್ವಾಮೀಜಿ

IMG-20240128-WA0034.jpg
Published on

ಹುಬ್ಬಳ್ಳಿ: ಶಿರಹಟ್ಟಿ ಭಾವೈಕ್ಯ ಸಂಸ್ಥಾನ ಪೀಠದ ಶ್ರೀಫಕೀರ ಸಿದ್ಧರಾಮ ಸ್ವಾಮೀಜಿ ಅಮೃತ ಮಹೋತ್ಸವ ಅಂಗವಾಗಿ ಫೆ. 1ರಂದು ನಗರದ ನೆಹರು ಮೈದಾನದಲ್ಲಿ ಏರ್ಪಡಿಸಲಾಗಿರುವ ಧಾಮಿರ್ಕ ಕಾರ್ಯಕ್ರಮಗಳ ಸಿದ್ಧತೆ ಭರ್ಜರಿಯಾಗಿ ನಡೆದಿವೆ.

ಶ್ರೀಫಕೀರ ಸಿದ್ಧರಾಮ ಸ್ವಾಮೀಜಿಗಳ ಆನೆಅಂಬಾರಿ ಸಹಿತ ತುಲಾಭಾರಕ್ಕಾಗಿ ತಕ್ಕಡಿ ಹಾಗೂ ಇತರ ಸಿದ್ಧತೆಗಳು ನಡೆಯುತ್ತಿವೆ. ಧರ್ಮಸಭೆಗಾಗಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಈ ಎಲ್ಲ ಕಾರ್ಯಗಳನ್ನು ಕಿರಿಯ ಸ್ವಾಮೀಜಿ ಶ್ರೀಫಕೀರ ದಿಂಗಾಲೇಶ್ವರ ಶ್ರೀಗಳು ಭಾನುವಾರ ಪರಿಶೀಲನೆ ಮಾಡಿದರು.

ಶ್ರೀಮಠದ ಆನೆಯನ್ನು ತಕ್ಕಡಿಯಲ್ಲಿ ಹತ್ತಿಸಿ ತುಲಾಭಾರದ ಪರೀಕ್ಷೆ ನಡೆಸಲಾಯಿತು. ಆನೆಯು ಅಂಬಾರಿ ಹೊತ್ತುಕೊಂಡು ತಕ್ಕಡಿಯ ಪರಡಿಯಲ್ಲಿ ಬಂದು ನಿಂತು ಸಹಕರಿಸಿತು.

ಈ ಸಂದರ್ಭದಲ್ಲಿ ಟೀಮ್ ಎಸ್ಆರ್ವಿ ಕಂಪನಿಯ ಶ್ಯಾಮ್ ಕೋಲಾರ್, ಪ್ರಕಾಶ ಬೆಂಡಿಗೇರಿ, ಮಲ್ಲಿಕಾರ್ಜುನ ಶಿರಗುಪ್ಪಿ, ನೂರಶೆಟ್ಟರ್ ಇತರರು ಉಪಸ್ಥಿತರಿದ್ದರು.

ಅಮೃತ ಮಹೋತ್ಸವ ನಿಮಿತ್ತ ಕಳೆದ ಜನೆವರಿ 10ರಿಂದ ನಗರದಲ್ಲಿ ಭಾವೈಕ್ಯ ರಥಯಾತ್ರೆ ಆರಂಭವಾಗಿದೆ. ನಗರದ ವಿವಿಧ ಬಡಾವಣೆಗಳಲ್ಲಿ ನಿತ್ಯ ಸಂಚರಿಸಿ ಸಾಮರಸ್ಯ ಮೂಡಿಸುತ್ತಿದೆ.
ಸಾವಿರಾರು ಭಕ್ತರು ಪಾಲ್ಗೊಂಡು ಉಭಯ ಶ್ರೀಗಳ ದರ್ಶನಾಶೀರ್ವಾದ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net