ಪ್ರತಿವರ್ಷದಂತೆ ಈ ಬಾರಿಯೂ ಅಂದು ಬೆಳಗ್ಗೆಯಿಂದ ಅಹೋರಾತ್ರಿಯವವರೆಗೆ ಶ್ರೀ ನರಸಿಂಹ ದೇವರ ಆವರಣದಲ್ಲಿ ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಸ್ಥಾನ ಆಡಳಿತ ಮಂಡಳಿ ಹಮ್ಮಿಕೊಂಡಿದೆ. ಅಂದು ಬೆಳಗ್ಗೆ 7 ಗಂಟೆಯಿಂದ ದೇವಸ್ಥಾನದ ಆವರಣದಲ್ಲಿ ಇರುವ ಶ್ರೀ ನರಸಿಂಹ ಸಹಿತಿ ಪ್ರಾಕಾರ ದೇವರುಗಳಿಗೆ ಅಭ್ಯಂಗಸ್ನಾನಾದಿಗಳು, ಪ್ರಾಕಾರ ಪೂಜೆಗಳು ನಡೆಯಲಿವೆ. 9.00 ಗಂಟೆಯಿಂದ ಗಣಪತಿ ಪೋಜೆ, ಪೂಣ್ಯಾಹ, ಕಲಶಸ್ಥಾಪನೆ, ಕಲಾವೃದ್ದಿ, ನರಸಿಂಹ ಮೂಲಮಂತ್ರ ಹವನ, ಕಲಾವೃದ್ಧಿ ಹವನ, ಪೂರ್ಣಾಹುತಿ ಇದರ ಜೊತೆ ಜೊತೆಗೆ ನರಸಿಂಹ ದೇವರ ಮಹಾ ಅಭಿಷೇಕ, ಪ್ರಧಾನ ಕಲಾಶಾಭಿಷೇಕ ಪೂಜೆ , ಕ್ಷೇತ್ರಪಾಲ ಬಲಿ ಇತ್ಯಾದಿ ಧಾರ್ಮಿಕ ಅಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.