ಮಾಜಿ ಸಚಿವ ಸಿದ್ದಿಕಿ ಹತ್ಯೆಗೆ ಮಲ್ಲಿಕಾರ್ಜುನ ಖರ್ಗೆ ದಿಗ್ಭ್ರಮೆ : ಮಹಾರಾಷ್ಟ್ರದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ : ಕಿಡಿ

kharge
Published on

ಸಿದ್ಧಾರ್ಥ ವಿಹಾರ ಟ್ರಸ್ಟ್ ಭೂಮಿ ವಾಪಸ್ ಪ್ರತಿಕ್ರಿಯೆಗೆ ನಕಾರ | ಜಿಎಸ್‌ಟಿ ವಿಷಯದಲ್ಲಿ ಕೇಂದ್ರ ಅನ್ಯಾಯ



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮುಂಬಯಿನಲ್ಲಿ ಮಾಜಿ ಸಚಿವ, ಎನ್‌ಸಿಪಿ ಮುಖಂಡ ಸಿದ್ದಿಕಿ ಹತ್ಯೆಗೆ ದಿಗ್ಭö್ರಮೆ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾರಾಷ್ಟçದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.
ನಗರದಲ್ಲಿ ಭಾನುವಾರ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ೧೫ ದಿನದಿಂದ ರೂಪಿಸಿದ್ದ ಸಂಚಿನAತೆ ಹಾಡಹಗಲೆ ಕಚೇರಿಗೆ ನುಗ್ಗಿ ಶೂಟ್ ಮಾಡಿದ್ದಾರೆ. ಜೀವ ಬೆದರಿಕೆಗೆ ಸಂಬAಧಿಸಿದAತೆ ಮಹಾರಾಷ್ಟç ಸರ್ಕಾರಕ್ಕೆ ಸಿದ್ದಿಕಿ ಮುನ್ಸೂಚನೆ ನೀಡಿದ್ದರಲ್ಲದೆ ಪೊಲೀಸರಿಗೂ ಮಾಹಿತಿ ಇತ್ತು. ಆದರೂ ಸರ್ಕಾರ ಗಂಭೀರ ಪರಿಗಣಿಸದ್ದರಿಂದ ಶೂಟೌಟ್ ನಡೆದಿದೆ ಎಂದು ವಿಷಾದಿಸಿದರು.
ಸಿದ್ಧಾರ್ಥ ಟ್ರಸ್ಟ್ಗೆ ಕೆಐಎಡಿಬಿ ನೀಡಿದ್ದ ೫ ಎಕರೆ ಜಮೀನು ವಾಪಸ್‌ಗೆ ಸಂಬAಧಿಸಿದAತೆ ಟ್ರಸ್ಟ್ ಅಧ್ಯಕ್ಷರನ್ನೇ ಕೇಳಿ ಎನ್ನುವ ಮೂಲಕ ಪ್ರತಿಕ್ರಿಯೆ ನೀಡದೆ ಖರ್ಗೆ ನುಣುಚಿಕೊಂಡರು.
ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಪುತ್ರ ರಾಹುಲï ಒಡೆತನದ ಸಿದ್ಧಾರ್ಥ ಟ್ರಸ್ಟ್ಗೆ ಕೆಐಎಡಿಬಿ ಬೆಂಗಳೂರು ದೇವನಹಳ್ಳಿ ಬಳಿ ಐದು ಎಕರೆ ಅಮೂಲ್ಯ ಜಾಗ ಮಂಜೂರು ಮಾಡಿತ್ತು. ಈ ಬಗ್ಗೆ ವಿಧಾನ ಪರಿಷತ್ ವಿಪP್ಷÀ ನಾಯಕ ಛಲವಾದಿ ನಾರಾಯಣಸ್ವಾಮಿ ರಾಜ್ಯಪಾಲರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ನಂತರ ಜಮೀನನ್ನು ಟ್ರಸ್ಟ್ ವಾಪಸ್ ನೀಡಿತು. ಸಿಎಂ ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ ನೀಡಿದ ಪ್ರಕರಣದಂತೆ ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಏನೇ ಕೇಳಿದರೂ ಖರ್ಗೆ ಪ್ರತಿಕ್ರಿಯೆ ನೀಡಲಿಲ್ಲ.
ರಾಜ್ಯದಲ್ಲಿ ವಸೂಲಿ ಮಾಡುವ ಜಿಎಸ್‌ಟಿ ಹಣದಲ್ಲಿ ಕೇಂದ್ರ ಸರ್ಕಾರ ಪಾಲು ನೀಡುತ್ತಿಲ್ಲ. ನಮಗಷ್ಟೇ ಅಲ್ಲ, ಬೇರೆ ಬೇರೆ ರಾಜ್ಯಗಳಿಗೂ ಕೇಂದ್ರ ಅನ್ಯಾಯ ಮಾಡುತ್ತಿದೆ. ರಾಜ್ಯಕ್ಕಾಗುತ್ತಿರುವ ಅನ್ಯಾಯ ಕುರಿತು ಸಿಎಂ ಹೋರಾಟ ಮಾಡುತ್ತಾರೆ. ನಾವು ಸಂಸತ್‌ನಲ್ಲೂ ಧ್ವನಿ ಎತ್ತುವುದಾಗಿ ಖರ್ಗೆ ಹೇಳಿದರು.

ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ
ಸಿದ್ದಿಕಿ ಹತ್ಯೆ ಆರೋಪಿಗಳ ಸಣ್ಣ ಸುಳಿವೂ ಸಿಕ್ಕಿಲ್ಲ. ಮಹಾರಾಷ್ಟçದಲ್ಲಿ ಅನೇಕ ಪP್ಷÀಗಳು ಸೇರಿ ನಿರ್ಣಯ ಕೈಗೊಂಡರೆ ಯಾರ ಮಾತು ಕೇಳಬೇಕು ಎಂಬ ಗೊಂದಲ ಅಧಿಕಾರಿಗಳಲ್ಲಿದೆ. ಮುಂಬರುವ ಚುನಾವಣೆಯಲ್ಲಿ ಅಲ್ಲಿನ ಪP್ಷÀ ಮತ್ತು ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಡಾ.ಮಲ್ಲಿಕಾರ್ಜುನ ಖರ್ಗೆ ಹೇಳಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net