ವಿದ್ಯಾರ್ಥಿಗಳಿಗೆ ‘ಝೀಲ್’ ಶೈಕ್ಷಣಿಕ ಮಾರ್ಗದರ್ಶನ

ಚಿತ್ರ 24ಎಸ್ ಡಿ ಪಿ 01.
Published on

ಸಿದ್ದಾಪುರ : ಮಾಲ್ದಾರೆ ಸರ್ಕಾರಿ ಶಾಲೆಯಲ್ಲಿ ಸೋಮವಾರ ಜಿಲ್ಲಾ ಎಸ್ಸೆಸ್ಸೆಫ್ ಸಮಿತಿ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೇರಣೆ ಮತ್ತು ಮಾರ್ಗದರ್ಶನ ನೀಡಲು ಝೀಲ್ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಾಬಿತ್ ಮಾತನಾಡಿ, ವಿದ್ಯಾರ್ಥಿಗಳು ಮುಂಬರಕಿರುವ ಪರೀಕ್ಷೆಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಓದಲು ಹೆಚ್ಚು ಸಮಯ ನೀಡಬೇಕು. ಮುಂದಿನ ಶಿಕ್ಷಣದ ವಿಭಾಗದ ಆಯ್ಕೆಗಳನ್ನು ಕುರಿತು ತಜ್ಞರ ಸಲಹೆಗಳನ್ನು ಸಂಸ್ಥೆಯಿಂದ ಒದಗಿಸಲಾಗುವುದು ಎಂದರು. ಜ್ಞಾನಾರ್ಜನೆಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಅವರು, ಪರೀಕ್ಷೆಗೆ ತಯಾರಿ ಕುರಿತಂತೆ ಉಪಯುಕ್ತ ಸಲಹೆ ಮತ್ತು ಟಿಪ್ಸ್‌ಗಳನ್ನು ನೀಡಿದರು.ಮುಖ್ಯ ಶಿಕ್ಷಕ ರಾಜೇಶ್ವರ್, ಶಿಕ್ಷಕಿ ಧನ್ಯಾ ಇತರರು ಇದ್ದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net