ಸ್ವಾತಂತ್ರೃ ಹೋರಾಟದಲ್ಲಿ ಸಿದ್ದಾಪುರಕ್ಕೆ ವಿಶೇಷ ಸ್ಥಾನ

kageri
Published on

ಸಿದ್ದಾಪುರ: ತ್ರಿಕಾಲ ಬಲಿ ಉತ್ಸವ ನಡೆಯುವ ಕ್ಷೇತ್ರ ಇಟಗಿಯು ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ಷೇತ್ರವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಇಟಗಿಯಲ್ಲಿ ದಿವ್ಯಾಷ್ಟಬಂಧ ಮಹೋತ್ಸವದಲ್ಲಿ ಪಾಲ್ಗೊಂಡು ಸ್ವಾತಂತ್ಯ ಸಂಗ್ರಾಮದಲ್ಲಿ ದೇವಸ್ಥಾನದ ಪಾತ್ರ ಎನ್ನುವ ಶಿಲಾಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ಸಿದ್ದಾಪುರ ತಾಲೂಕು ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಸಾವಿರಕ್ಕೂ ಅಧಿಕ ಸ್ವಾತಂತ್ರ್ಯ ಹೋರಾಟಗಾರರು ಸಿದ್ದಾಪುರ ತಾಲೂಕಿನಲ್ಲಿ ಇದ್ದರು ಎನ್ನುವುದು ಹೆಮ್ಮೆಯ ವಿಷಯವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಿದ್ದಾಪುರದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕೇಳಿ ಬಹಳ ಸಂತಸಪಟ್ಟರು. ಸ್ವಾತಂತ್ರ್ಯ ಹೋರಾಟದಲ್ಲಿ ಈ ತರಹದ ದೇವಸ್ಥಾನಗಳಿಂದ ದೊಡ್ಡ ಮಟ್ಟದ ಸಹಾಯ ದೊರಕಿದೆ. ಅದರಲ್ಲೂ ಇಟಗಿ ಕ್ಷೇತ್ರದಂತಹ ಸ್ಥಳಗಳು ಪ್ರತಿ ಹಂತದಲ್ಲೂ ಒಂದಲ್ಲ ಒಂದು ರೀತಿಯ ಸಹಾಯ-ಸಹಕಾರವನ್ನು ಒದಗಿಸಿದೆ. ಕ್ಷೇತ್ರದಲ್ಲಿ ನಡೆಯುವ ತ್ರಿಕಾಲ ಬಲಿ ಉತ್ಸವವು ನೋಡಲು ಸಿಗುವುದು ವಿರಳಾತಿವಿರಳ ಮತ್ತು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.

ಅಷ್ಟಬಂಧ ಮಹೋತ್ಸವ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಸ್ವಾಗತಿಸಿದರು . ಇಟಗಿ ರಾಮೇಶ್ವರ ದೇವಾಲಯದ ಮೋಕ್ತೇಸರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಹೆಗಡೆ ಕೊಡ್ತಗಣಿ, ಹಿರಿಯ ವಕೀಲ ಜೆ.ಪಿ.ಎನ್ ಹೆಗಡೆ ಹರಗಿ, ನಾರಾಯಣಮೂರ್ತಿ ಹೆಗಡೆ ಹರಗಿ ,ಜಿ.ಬಿ. ಹೆಗಡೆ, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ತಿಮ್ಮಪ್ಪ ಎಂ.ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net