ರೈತರ ಸಮಸ್ಯೆಗಳಿಗೆ ಸಕಾಲಕ್ಕೆ ಸ್ಪಂದಿಸುವಂತೆ ಶಾಸಕ ಬಸವರಾಜ ದಢೇಸುಗೂರು ಅಧಿಕಾರಿಗಳಿಗೆ ಸೂಚನೆ

300422 MLA Basavaraja Dasseguru Land View in Siddapur
ಸಿದ್ದಾಪುರದಲ್ಲಿ ಶಾಸಕ ಬಸವರಾಜ ದಢೇಸುಗೂರು ಜಮೀನು ವೀಕ್ಷಣೆ ಮಾಡಿದರು.
Published on

ಸಿದ್ದಾಪುರ: ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಭತ್ತ ಹಾನಿಯಾಗಿದೆ. ಕೂಡಲೇ ಸಮೀಕ್ಷೆ ನಡೆಸುವಂತೆ ಅಧಿಕಾರಿಗಳಿಗೆ ಶಾಸಕ ಬಸವರಾಜ ದಢೇಸುಗೂರು ಸೂಚಿಸಿದ್ದಾರೆ. ಸಿದ್ದಾಪುರ ಹೋಬಳಿ ವ್ಯಾಪ್ತಿಯ ಲಕ್ಷ್ಮೀಕ್ಯಾಂಪ್, ಗುಂಡೂರು, ಉಳೇನೂರು, ನಂದಿಹಳ್ಳಿ, ಬೆನ್ನೂರು ಗ್ರಾಮಗಳಲ್ಲಿ ಶನಿವಾರ ಬೆಳೆ ಹಾನಿ ವೀಕ್ಷಿಸಿ ಮಾತನಾಡಿದರು. ಕೈಗೆ ಬಂದ ಬೆಳೆಯನ್ನು ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ವಸ್ತುಸ್ಥಿತಿ ಅರಿತು ಸಮೀಕ್ಷೆ ಕಾರ್ಯ ನಡೆಸಬೇಕು. ಶೀಘ್ರ ವರದಿ ಸಲ್ಲಿಸುವಂತೆ ಸೂಚಿಸಿದರು. ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಭಾವಿ, ಮಾಜಿ ಸದಸ್ಯ ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಜಿಪಂ ಮಾಜಿ ಸದಸ್ಯ ವಿರೇಶ್ ಸಾಲೋಣಿ, ಮುಖಂಡರಾದ ದುರುಗೇಶ್ ಕೋರಿ, ಶಾಂತಾ ಪವರ್, ತಹಸೀಲ್ದಾರ್ ರವಿ ಅಂಗಡಿ, ತಾಪಂ ಪ್ರಭಾರ ಇಒ ಡಿ. ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net