

ಸಿದ್ದಾಪುರ: ಗ್ರಾಮ ಸೇರಿ ಸುತ್ತಲಿನ ಊರುಗಳಲ್ಲಿ ಸಾರ್ವಜನಿಕರು ಸಂಭ್ರಮದಿಂದ ವಿಜಯ ದಶಮಿ ಹಬ್ಬವನ್ನು ಗುರುವಾರ ಆಚರಿಸಿದರು. ಬುಧವಾರ ಆಯುಧ ಪೂಜೆಯನ್ನು ಸಹ ಸಡಗರದಿಂದ ಆಚರಿಸಲಾಯಿತು.
ದಸರಾ ಹಿನ್ನೆಲೆಯಲ್ಲಿ ಹೂ, ಹಣ್ಣುಗಳ ದರಗಳು ಗಗನಕ್ಕೇರಿದ್ದವು. ಆದರೂ, ಸಹ ಜನರು ಬಾಳೆದಿಂಡು, ಹೂ-ಹಣ್ಣು, ಕಾಯಿ ಖರೀದಿಸಿ ಹಬ್ಬ ಆಚರಿಸಿದರು. ಇನ್ನು ಸಂಪ್ರದಾಯದಂತೆ ಜಮೀನುಗಳಲ್ಲಿ ಬೆಳೆದ ಫಸಲನ್ನು ತಂದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳೆ ಸಮೃದ್ಧವಾಗಲಿ ಎಂದು ಪ್ರಾರ್ಥಿಸಿದರು.
ವಿಜಯದಶಮಿ ನಿಮಿತ್ತ ಬನ್ನಿ ಮಹಾಂಕಾಳಿಗೆ ಪೂಜೆ ಸಲ್ಲಿಸಿ, ಬನ್ನಿ ಮುಡಿದು ಪರಸ್ಪರ ಶುಭಾಶಯ ಕೋರಿ ಹಾರೈಸಿದರು.