ಅಪ್ಪು ತತ್ವಾದರ್ಶ ರೂಢಿಸಿಕೊಳ್ಳಿ: ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರ ಸಲಹೆ

021122 Gunduru Appu Statue Innogration
ಗುಂಡೂರಿನಲ್ಲಿ ಅಪ್ಪು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಮಾತನಾಡಿದರು.
Published on

ಸಿದ್ದಾಪುರ: ನಟ ಡಾ.ಪುನೀತ್ ರಾಜಕುಮಾರ್ ಆದರ್ಶ ಗುಣಗಳನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಹೇಳಿದರು.

ಗುಂಡೂರು ಗ್ರಾಮದಲ್ಲಿ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಪುತ್ಥಳಿ ಅನಾವರಣಗೊಳಿಸಿ ಮಂಗಳವಾರ ಮಾತನಾಡಿದರು. ಯುವಕರು ಕೇವಲ ಅಪ್ಪು ಪುತ್ಥಳಿ ನಿರ್ಮಿಸಿದರೆ ಸಾಲದು. ಅದರ ಜತೆಗೆ ಉತ್ತಮ ಕಾರ್ಯಗಳನ್ನು ಮಾಡಬೇಕು. ಮುಖ್ಯವಾಗಿ ದುಶ್ಚಟಗಳನ್ನು ಕೈಬಿಡಬೇಕು. ಸಮಾಜದಲ್ಲಿ ನಾವೆಲ್ಲರೂ ಜಾತಿ, ಮೇಲು-ಕೀಳು ಎನ್ನುವ ಭಾವನೆ ಬಿಟ್ಟು ಒಗ್ಗಟ್ಟಿನಿಂದ ಬಾಳಬೇಕು ಎಂದರು. ಇದಕ್ಕೂ ಮುನ್ನ ಅಪ್ಪು ಅಭಿಮಾನಿಗಳಿಂದ ಗ್ರಾಮದಲ್ಲಿ ಆಟೋ ರ‌್ಯಾಲಿ ನಡೆಸಲಾಯಿತು. ಹೀರೆಮಠದ ಉಮೇಶ ತಾತ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ್, ಮುಖಂಡರಾದ ರಡ್ಡಿ ಶ್ರೀನಿವಾಸ, ಶ್ರೀನಿವಾಸ ಲಕ್ಷ್ಮೀಕ್ಯಾಂಪ್, ನವಮೋಹನರಾವ್, ಚಂದ್ರಶೇಖರ್ ಮುಸಾಲಿ, ರಾಜಶೇಖರ, ರಾಧಾಕೃಷ್ಣ, ಅಪ್ಪು ಅಭಿಮಾನಿಗಳಾದ ಸುರೇಶ್ ಬಾಬು, ರಮೇಶ್, ನಬೀ, ಹನುಮೇಶ್ ಗುರಿಕಾರ್, ವಿನೋದ್, ಹುಲಿಯಾ, ಅರವಿಂದ್, ರಫಿ, ಶ್ರೀನಾಥ್ ಈ, ಮುನ್ನ, ತಿಮ್ಮಣ್ಣ, ವೀರೇಶ್ ಆರಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net