

ಸಿದ್ದಾಪುರ: ಕಳೆದ ಒಂದು ವಾರದಿಂದ ಬಿರುಸುಗೊಂಡಿದ್ದ ಗಾಳಿ-ಮಳೆ ಮಂಗಳವಾರ ಸ್ವಲ್ಪ ಕಡಿಮೆಯಾಗಿದ್ದು ಸಿದ್ದಾಪುರ-ಶಿರಸಿ ರಾಜ್ಯ ಹೆದ್ದಾರಿಯ ವಿದ್ಯಾಗಿರಿ ಸಮೀಪ ರಸ್ತೆಗೆ ಅಡ್ಡವಾಗಿ ಮರವೊಂದು ಮಂಗಳವಾರ ಬಿದ್ದು ಸ್ವಲ್ಪ ಸಮಯ ಸಂಚಾರ ಸ್ಥಗಿತಗೊಂಡಿತ್ತು.
ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲಮಾಡಿಕೊಟ್ಟರು. ಮನಮನೆಯ ಲೋಕೇಶ ದ್ಯಾವಾ ನಾಯ್ಕ ಅವರ ಕೊಟ್ಟಿಗೆ ಮನೆ ಗಾಳಿ-ಮಳೆಗೆ ಕುಸಿದು ಬಿದ್ದಿದೆ. ತಾಲೂಕಿನಲ್ಲಿ ಸೋಮವಾರ ಬೆಳಗ್ಗೆಯಿಂದ ಮಂಗಳವಾರ ಬೆಳಗ್ಗೆಯವರೆಗೆ 85.4 ಮಿಮೀ ಮಳೆಯಾಗಿದ್ದು, ಇಂದಿನವರೆಗೆ ಒಟ್ಟು 148.76 ಸೆಂಮೀ ಮಳೆ ಬಿದ್ದು ದಾಖಲಾಗಿದೆ.