ಸಮರ್ಪಕ ಗೊಬ್ಬರ ವಿತರಿಸಿ

ಸಿದ್ದಾಪುರದ ಸೊಸೈಟಿಗೆ ಮುಂದೆ ರೈತರು ಸಮರ್ಪಕವಾಗಿ ಗೊಬ್ಬರ ವಿತರಿಸುವಂತೆ ಪ್ರತಿಭಟನೆ ನಡೆಸಿದರು. ರೈತ ಸಂಪರ್ಕ ಕೇಂದ್ರದ ಅಧಿಕಾರಿ ವೈ.ಸುಧಾಕರ, ಪ್ರಮುಖರಾದ ಮಹಮ್ಮದ್ ಮಾನ್ವಿ, ಬಸವರಾಜ ಬಳಿಗೇರ್, ನಂದಾಪುರ ವೀರಭದ್ರಯ್ಯ, ಬಡಿಗೇರ್ ಬಸವರಾಜ, ಮಲ್ಲಿಕಾರ್ಜುನ ಸಜ್ಜನ್, ಚನ್ನಬಸಪ್ಪ ಹೊಸಮನಿ ಇತರರಿದ್ದರು.
Published on

ಸಿದ್ದಾಪುರ: ರೈತರಿಗೆ ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಿಸುವಂತೆ ಆಗ್ರಹಿಸಿ ಸಿದ್ದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಮಂಗಳವಾರ ಕೃಷಿಕರು ಪ್ರತಿಭಟನೆ ನಡೆಸಿದರು.

ಈಗಾಗಲೇ ಭತ್ತ ನಾಟಿ ಮಾಡಲಾಗಿದೆ. ಉತ್ತಮ ಮಳೆಯಾಗುತ್ತಿದ್ದು, ಬೆಳೆಗೆ ಗೊಬ್ಬರದ ಅವಶ್ಯಕತೆಯಿದೆ. ಆದರೆ, ಸೊಸೈಟಿಯಲ್ಲಿ ಶೇರುದಾರರು ಹೆಚ್ಚಾಗಿದ್ದು, ಅವಶ್ಯಕತೆಗೆ ತಕ್ಕಷ್ಟು ಗೊಬ್ಬರ ದೊರೆಯುತ್ತಿಲ್ಲ. ಈಗಾಗಲೇ ಸೊಸೈಟಿಗೆ 2 ಬಾರಿ 20 ಟನ್ ಗೊಬ್ಬರ ವಿತರಿಸಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭತ್ತದ ಗದ್ದೆಗಳಿಗೆ ಸಾಲುತ್ತಿಲ್ಲ. ಆದ್ದರಿಂದ ಬೆಳೆಗಳ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಆನೇಕ ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ನಮಗೆ ಕನಿಷ್ಠ 40-50 ಟನ್ ಗೊಬ್ಬರ ಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಮಹಮ್ಮದ್ ಮಾನ್ವಿ, ಬಸವರಾಜ ಬಳಿಗೇರ್, ನಂದಾಪುರ ವೀರಭದ್ರಯ್ಯ, ಬಡಿಗೇರ್ ಬಸವರಾಜ, ಮಲ್ಲಿಕಾರ್ಜುನ ಸಜ್ಜನ್, ಚನ್ನಬಸಪ್ಪ ಹೊಸಮನಿ, ಹಳದಪ್ಪ ಕೃಷ್ಟಾಪೂರ, ಶರಣೇಗೌಡ ಪೊಲೀಸ್ ಪಾಟೀಲ್, ಕೊಟ್ರಯ್ಯ ಸ್ವಾಮಿ, ಮಲ್ಲೆಪ್ಪ ಮೂಲಿಮನಿ, ಮೌಲಪ್ಪ, ದಾದಾಪೀರ್, ವಿಶ್ವನಾಥ ಮೂಲಿಮನಿ, ರುದ್ರಪ್ಪ, ಬಸವರಾಜ ಚೆನ್ನಳ್ಳಿ, ಶರಣಪ್ಪ ಗುಂಡೇಗೌಡ್ರು, ಕರಿಯಪ್ಪ ಕಟಗಿ ಇತರರಿದ್ದರು.

ಕೃಷಿ ಅಧಿಕಾರಿ ವಿರುದ್ಧ ಆಕ್ರೋಶ

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವೈ.ಸುಧಾಕರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕ ಗೊಬ್ಬರ ವಿತರಿಸದ ಹಿನ್ನೆಲೆಯಲ್ಲಿ ಸಂಕಷ್ಟ ಎದುರಾಗಿದೆ. ಬೆಳೆಗಳ ನಿರ್ವಹಣೆಗೆ ಯೂರಿಯಾ ಅವಶ್ಯ ಎಂದು ಅಳಲು ತೋಡಿಕೊಂಡರು. ರೈತರನ್ನು ಸಮಾಧಾನಪಡಿಸಲು ಕೃಷಿ ಅಧಿಕಾರಿ ಹರಸಾಹಸ ಪಟ್ಟರು. ಕೃಷಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಶೀಘ್ರ ಗೊಬ್ಬರ ವಿತರಿಸುವ ಭರವಸೆ ನೀಡಿದ್ದಾರೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂಡು ಸಮಾದಾನ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net