

ಸಿದ್ದಾಪುರ: ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಸಾವಿರಾರು ರೂ. ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾದ ಘಟನೆ ಸಿದ್ದಾಪುರ ಸಮೀಪದ ಬೆನ್ನೂರಲ್ಲಿ ಸೋಮವಾರ ನಡೆದಿದೆ.
ಗ್ರಾಮದ ದೊಡ್ಡ ಯಮನೂರ ಎಂಬುವರಿಗೆ ಸೇರಿದ ಟೀ ಸ್ಟಾಲ್‌ನಲ್ಲಿ ಎಂದಿನಂತೆ ಟೀ ಮಾಡುವಾಗ ಈ ದುರ್ಘಟನೆ ಸಂಭವಿಸಿದೆ. ಇದ್ದಕ್ಕಿಂದ್ದಂತೆ ಸಿಲಿಂಡರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಭಯದಿಂದ ಮಾಲೀಕ ದೊಡ್ಡ ಯಮನೂರಪ್ಪ ಹಾಗೂ 20ಕ್ಕೂ ಹೆಚ್ಚು ಜನರು ಸ್ಟಾಲ್‌ನಿಂದ ಓಡಿ ಹೋಗಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬಳಿಕ ಜನರು ಸ್ಥಳಕ್ಕೆ ಧಾವಿಸಿ, ನೀರು ಹಾಕಿ ಬೆಂಕಿ ನಂದಿಸಿದ್ದಾರೆ.