

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯಿಂದ ಸಾರ್ವಜನಿಕ ಸೇವೆಗೆ ಐಸಿಯು ಆಂಬ್ಯುಲನ್ಸನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.
ಎಸ್‌ಕೆಎಸ್‌ಎಸ್‌ಎಫ್ ಸಂಘಟನೆಯ ೨೪ನೆ ವಾರ್ಷಿಕೋತ್ಸವ ಪ್ರಯುಕ್ತ ಮರ್ಹೂಂ ಉಸ್ಮಾನ್ ಹಾಜಿ ಜ್ಞಾಪಕಾರ್ಥವಾಗಿ ಅತ್ಯಾಧುನಿಕ ಮಾದರಿಯ ಐಸಿಯು ಆಂಬ್ಯುಲನ್ಸಿನ ಕೀಲಿ ಕೈಯನ್ನು ಸಮಸ್ತ ಮುಶಾವರಾ ಕೇಂದ್ರ ಸಮಿತಿ ಸದಸ್ಯ ಕೊಡಗು ನಾಯಿಬ್ ಖಾಝಿ ಎಂ.ಎಂ ಅಬ್ದುಲ್ಲಾ ಫೈಝಿ ಅವರು ಸಂಘಟನೆಯ ಸಿದ್ದಾಪುರ ವಲಯ ಅಧ್ಯಕ್ಷ ಎಂ.ಎಂ. ಸರ್ಫುದ್ದೀನ್‌ಗೆ ಹಸ್ತಾಂತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಕೋವಿಡ್ ಸಂದರ್ಭದ ಸೇವೆ ಗುರುತಿಸಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಹಲವು ವರ್ಷಗಳಿಂದ ಸಿದ್ದಾಪುರ ವ್ಯಾಪ್ತಿಯಲ್ಲಿ ಆಂಬ್ಯುಲನ್ಸ್ ಕೊರತೆ ಇರುವುದನ್ನು ಅರಿತು ದಾನಿಗಳ ಸಹಕಾರ ದೊಂದಿಗೆ ಐಸಿಯು, ಆಕ್ಸಿಜನ್, ವೆಂಟಿಲೇಟರ್, ಇಸಿಜಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳಿರುವ ಆಂಬ್ಯುಲನ್ಸನ್ನು ಲೋಕಾರ್ಪ ಣೆಗೊಳಿಸಲಾಗಿದೆ. ಕಡು ಬಡವರು, ನಿರ್ಗತಿಕರಿಗೆ ಉಚಿತ ಸೇವೆ ಒದಗಿಸುವುದಾಗಿ ಎಂ.ಎಂ. ಸರ್ಫುದ್ದೀನ್ ತಿಳಿಸಿದರು.
ಸಿದ್ದಾಪುರ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಮುಸ್ತಫ ಹಾಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಕೆ.ಎಂ ಇಬ್ರಾಹಿಂ, ಸ್ಥಳೀಯ ಮಸೀದಿ ಖತೀಬ್ ನೌಫಲ್ ಹುದವಿ, ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ತಮ್ಲೀಕ್ ದಾರಿಮಿ, ಕೆಎಂಸಿಸಿ ಆಂಬ್ಯುಲನ್ಸ್ ಚಾಲಕ ಹನೀಫ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಡಾ.ಮಂಥರ್ ಗೌಡ, ವಿ.ಪಿ. ಶಶಿಧರ್, ನೆಲ್ಯಹುದಿಕೇರಿ ಗ್ರಾಪಂ ಅಧ್ಯಕ್ಷ ಎ.ಕೆ. ಹಕೀಂ, ಪ್ರಮುಖರಾದ ರವೂಫ್ ಹಾಜಿ, ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಿಪಿಎಂ ಬಶೀರ್ ಹಾಜಿ, ಉಮ್ಮರ್ ಫೈಝಿ, ಆರಿಫ್ ಫೈಝಿ, ಸಬಾಸ್ಟಿನ್, ಕೆ.ಯು. ಮಜೀದ್, ಹಸೈನಾರ್ ಮತ್ತಿತರರು ಇದ್ದರು.