ಸಿದ್ದಾಪುರದಲ್ಲಿ ಮೈದುಂಬಿ ಹರಿಯುತ್ತಿದೆ ಹಳ್ಳ

Untitled design(3)
ಮಳೆಯಿಂದಾಗಿ ಸಿದ್ದಾಪುರದ ಹಳ್ಳ ತುಂಬಿ ಹರಿಯುತ್ತಿರುವುದು.
Published on

ಸಿದ್ದಾಪುರ: ಗುರುವಾರ ಬೆಳ್ಳಂ ಬೆಳಗ್ಗೆ ಗ್ರಾಮ ಸೇರಿ ಇತರೆಡೆ ಸುಮಾರು ಎರಡು ಗಂಟೆಗೂ ಅಧಿಕ ಸಮಯ ಭಾರಿ ಮಳೆ ಸುರಿಯಿತು. ಕಳೆದ ಕೆಲ ದಿನಗಳಿಂದ ಬಿಸಿಲಿನ ವಾತಾವರಣವಿತ್ತು. ಆದರೆ, ತೀವ್ರ ಸೆಕೆ ಜನರನ್ನು ಹೈರಾಣಾಗಿಸಿತ್ತು. ಆದರೆ, ಗುರುವಾರ ಬೆಳಗಿನ ಜಾವ 3.30ರ ಬಳಿಕ ಮಳೆರಾಯನ ಆರ್ಭಟ ಶುರುವಾಯಿತು. ಗುಡುಗು, ಸಿಡಿಲು ಸಹಿತ ವರುಣನ ಆರ್ಭಟ ಹೆಚ್ಚಿತ್ತು.

ಇದರಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಕೆಸರು ಮಯವಾಗಿವೆ. ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಬರಗೂರು, ಕೊಟ್ನೇಕಲ್, ಜಮಾಪುರ, ಉಳೇನೂರು, ಬೆನ್ನೂರು, ಕಕ್ಕರಗೋಳ, ಗುಂಡೂರು, ಸಿಂಗನಾಳ, ಶಾಲಿಗನೂರು ಸೇರಿ ಇತರೆಡೆ ಮಳೆಯಾಗಿದೆ. ಬಹು ದಿನಗಳ ಬಳಿಕ ವರುಣನ ಅಬ್ಬರಿಸಿದ್ದು, ಕೊನೇ ಭಾಗದ ರೈತರಿಗೆ ಮಳೆ ವರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net