ಈಳಿಗನೂರಿನಲ್ಲಿ ಆಟವಾಡಲು ಹೋಗಿದ್ದ ಬಾಲಕ ಹಳ್ಳದಲ್ಲಿ ಬಿದ್ದು ಸಾವು

29082022 siddapur rain boy dead
Published on


ಸಿದ್ದಾಪುರ: ಸಮೀಪದ ಈಳಿಗನೂರಿನಲ್ಲಿ ಭಾನುವಾರ ಸೈಕಲ್ನೊಂದಿಗೆ ಆಯತಪ್ಪಿ ಹಳ್ಳಕ್ಕೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ. ಎರಡ್ಮೂರು ದಿನಗಳಿಂದ ಮಳೆಯಾದ ಕಾರಣ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದವು. ಶಾಲೆಗೆ ರಜೆಯಿದ್ದ ಕಾರಣ ಅಣ್ಣ ಹಾಗೂ ತಮ್ಮ ಆಟವಾಡಲು ಸೈಕಲ್‌ನಲ್ಲಿ ತೆರಳುತ್ತಿದ್ದರು. ಹಳ್ಳದ ಬಳಿ ತಗ್ಗು-ದಿನ್ನೆಗಳಿದ್ದು ಆಯತಪ್ಪಿ ಬಿದ್ದಿದ್ದಾರೆ. ತಮ್ಮ ಮಲ್ಲಿಕಾರ್ಜುನ ಈಜಿ ದಡ ಸೇರಿದರೆ, ಅಣ್ಣ ನಂದಾ ಬಡಿಗೇರಾ (13) ನೀರಿನಲ್ಲಿ ಮುಳುಗಿ ಉಸಿರುಗಟ್ಟಿದೆ. ತಕ್ಷಣ ಕಾರಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸಲಿಲ್ಲ. ನಂದಾ 7ನೇ ತರಗತಿ ಓದುತ್ತಿದ್ದು, ಕರಾಟೆ ಪಟುವಾಗಿದ್ದ ಎನ್ನಲಾಗಿದೆ. ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net