ನೆಲ್ಯಹುದಿಕೇರಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ

27 (1)
Published on

ಸಿದ್ದಾಪುರ : ನೆಲ್ಯಹುದಿಕೇರಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಗ್ರಾಮದ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಲಾಯಿತು.

ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರ ಸಮ್ಮುಖದಲ್ಲಿ ನಿರಾಶ್ರಿತರಿಂದಲೇ ಚೀಟಿ ಎತ್ತಿಸುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.

ಎಸಿ ಜವರೇಗೌಡ ಮಾತನಾಡಿ, ಅರೆಕಾಡು ಗ್ರಾಮದಲ್ಲಿ ವಾಸಕ್ಕೆ ಯೋಗ್ಯವಾದೆಡೆ ಸರ್ಕಾರಿ ಜಾಗ ಗುರುತಿಸಿ ಬಡಾವಣೆ ನಕ್ಷೆ ತಯಾರು ಮಾಡಲಾಗಿದೆ. 3040 ನಿವೇಶನ ಹಂಚಿಕೆ ಮಾಡಲಾಗುತ್ತಿದ್ದು, 116 ನಿರಾಶ್ರಿತರಿಗೆ ಪ್ರಥಮ ಹಂತದಲ್ಲಿ ನಿವೇಶನ ನೀಡಲಾಗುತ್ತಿದೆ.


ಎ ಮತ್ತು ಬಿ ಪಟ್ಟಿ ಆಧಾರದಲ್ಲಿ ನಿವೇಶನ ಹಂಚಿಕೆ ಮಾಡಲಾಗುತ್ತಿದ್ದು, ಸಂಪೂರ್ಣ ಮನೆ ಕಳೆದುಕೊಂಡವರನ್ನು ಎ ಪಟ್ಟಿಯಲ್ಲಿ ಹಾಗೂ ಶೇ.75ರ ಒಳಗೆ ಮನೆ ಹಾನಿಯಾದವರನ್ನು ಬಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಎ ಪಟ್ಟಿಯಿಂದ 66 ಹಾಗೂ ಬಿ ಪಟ್ಟಿಯಿಂದ 50 ನಿವೇಶನ ಆಯ್ಕೆ ಮಾಡಲಾಗಿದ್ದು, ಶಾಸಕರ ಸಮ್ಮುಖದಲ್ಲಿ ಹಂಚಿಕೆ ಮಾಡಲಾಗಿದೆ ಎಂದರು.


ಸರ್ಕಾರದಿಂದ ನಿವೇಶನ ನೀಡಲಾಗಿದ್ದು, ನದಿ ತಟದಲ್ಲಿ ಅಧಿಕೃತ ಮನೆ ಹೊಂದಿರುವ ನಿರಾಶ್ರಿತರಿಗೆ ತಲಾ 5ಲಕ್ಷ ಮನೆ ನಿರ್ಮಾಣಕ್ಕೆ ಹಣ ನೀಡಲಾಗುವುದೆಂದರು. ಆ ಹಣದೊಂದಿಗೆ ಸ್ವಂತ ಹಣವೂ ಸೇರಿಸಿ ಉತ್ತಮ ಮನೆ ನಿರ್ಮಿಸಲು ಸಲಹೆ ನೀಡಿದರು.
ನೆಲ್ಯಹುದಿಕೇರಿ ಗ್ರಾಪಂ ಉಪಾಧ್ಯಕ್ಷೆ ಸಫಿಯಾ, ತಾಪಂ ಸದಸ್ಯೆ ಸುಹಾದ ಅಶ್ರಫ್, ಪಿಡಿಒ ಅನಿಲ್‌ಕುಮಾರ್, ಸೋಮವಾರಪೇಟೆ ತಹಸಿಲ್ದಾರ್ ಗೋವಿಂದರಾಜು, ವಿಎ ಅನುಷಾ, ಸಂತೋಷ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net