ಬೆಳೆಹಾನಿ ಪರಿಹಾರ ಕೊಡಿಸುವೆ

tangadagi
ಸಿದ್ದಾಪುರ ಸಮೀಪದ ಉಳೇನೂರು ನದಿ ಪಾತ್ರದ ಬೆಳೆಹಾನಿ ಪ್ರದೇಶಗಳಿಗೆ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಂಗ್ರೆಸ್ ಮುಖಂಡರಾದ ಅಂಬಣ್ಣ ನಾಯಕ, ಬಸವರಾಜ ಸಾಹುಕಾರ್ ಬೆನ್ನೂರು, ಶರಣೇಗೌಡ ಪೊಲೀಸ್ ಪಾಟೀಲ್, ಶಿವರಾಜ್ ಪೊಲೀಸ್ ಪಾಟೀಲ್ ಇದ್ದರು.
Published on

ಸಿದ್ದಾಪುರ: ತುಂಗಭದ್ರಾ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟರೆ ರೈತರ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಿದ್ದಾಪುರ ಸಮೀಪದ ಉಳೇನೂರು ಬೆನ್ನೂರು ನದಿ ಪಾತ್ರದ ಬೆಳೆಹಾನಿ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಬಿಜೆಪಿ ನಾಯಕರು ಹೇಳಿದಂತೆ ಜಲಾಶಯದಿಂದ 2 ಲಕ್ಷ ಕ್ಯೂಸೆಕ್ ನೀರು ಬಿಟ್ಟಿಲ್ಲ. 1.68 ಲಕ್ಷ ಕ್ಯೂಸೆಕ್ ಬಿಡಲಾಗಿದೆ. ನಮಲ್ಲಿ 2.50 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಲಿದೆ. ಸದ್ಯ ತಕ್ಕ ಮಟ್ಟಿಗೆ ಬೆಳೆ ಹಾನಿಯಾಗಿದೆ. ಈ ಸಂಬಂಧ ತಹಸೀಲ್ದಾರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಶೀಘ್ರವೆ ಬೆಳೆಹಾನಿಗೆ ಪರಿಹಾರ ಕೊಡಿಸುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು. ಬೆಳೆಹಾನಿ ಬಗ್ಗೆ ಆ.3 ರಂದು ಎಲ್ಲ ತಾಲೂಕುಗಳ ತಹಸೀಲ್ದಾರರ ಸಭೆ ನಡೆಸುತ್ತೇನೆ ಎಂದರು. ಕಾಂಗ್ರೆಸ್ ಮುಖಂಡರಾದ ಅಂಬಣ್ಣ ನಾಯಕ, ಬಸವರಾಜ ಸಾಹುಕಾರ್ ಬೆನ್ನೂರು, ಶರಣೇಗೌಡ ಪೊಲೀಸ್ ಪಾಟೀಲ್, ಶಿವರಾಜ್ ಪೊಲೀಸ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net