ಮಾಲ್ದಾರೆಯ ಕಲ್ಲಳ್ಳ ಕಾಫಿ ತೋಟದಲ್ಲಿ ಹುಲಿ ಸೆರೆ

20mdks9 - Copy
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಮಾಲ್ದಾರೆ ವ್ಯಾಪ್ತಿಯಲ್ಲಿ ಭಯ ಮೂಡಿಸಿದ್ದ ಹುಲಿಯನ್ನು ಅರಣ್ಯ ಇಲಾಖೆಯವರು ಮಂಗಳವಾರ ಸೆರೆಹಿಡಿದಿದ್ದಾರೆ. ಆ ಮೂಲಕ ನಾಲ್ಕು ದಿನದಿಂದ ನಡೆಯುತ್ತಿದ್ದ ಅರಣ್ಯ ಇಲಾಖೆ ಕಾರ್ಯಾಚರಣೆ ಸಫಲವಾಗಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಳ್ಳ ಭಾಗದ ಕಾಫಿ ತೋಟದಲ್ಲಿ ಮಂಗಳವಾರ ಹುಲಿ ಕಾಣಿಸಿಕೊಂಡಿತ್ತು. ಹುಲಿ ಸೆರೆ ಕಾರ್ಯಾಚರಣೆ ಪ್ರಾರಂಭಿಸಿದ ಅರಣ್ಯ ಇಲಾಖೆ ತಂಡ ಸಂಜೆ ಹೊತ್ತಿಗೆ ಅಂದಾಜು ೧೩ ವರ್ಷ ಪ್ರಾಯದ ಹುಲಿ ಸೆರೆಹಿಡಿಯುವಲ್ಲಿ ಸಫಲರಾಗಿದ್ದಾರೆ.

ಕುಶಾಲನಗರ ವಲಯದ ಉಪ ವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಕಫಿ ತೋಟದಲ್ಲಿದ್ದ ಹುಲಿಗೆ ಎರಡು ಬಾರಿ ಮತ್ತು ಬರುವ ಗುಂಡು ಹಾರಿಸಿದರು. ಈ ಹುಲಿಯ ಕಾಲಿಗೆ ಪೆಟ್ಟಾಗಿದ್ದು, ಮೈಸೂರು ಮೃಗಾಲಯಕ್ಕೆ ಸಾಗಿಸಲಾಗಿದೆ. ದುಬಾರೆ ಆನೆ ಶಿಬಿರದ ನಾಲ್ಕು ಸಾಕಾನೆಯೊಂದಿಗೆ ೫೦ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಿಕುಟ್ಟೀರ ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ಗೋಪಾಲ್, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ಹುಲಿ ಸೆರೆ ಹಿಡಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೆಲವು ದಿನಗಳ ಹಿಂದೆ ಮಾಲ್ದಾರೆಯಲ್ಲಿ ಜಾನುವಾರು ಬಲಿ ತೆಗೆದುಕೊಂಡಿತ್ತು. ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಕಾಣಿಸಿಕೊಂಡಿ ದ್ದರಿಂದ ಬೆಳೆಗಾರರು, ಕಾರ್ಮಿಕರು ಸೇರಿದ್ದಂತೆ ಸಾರ್ವಜನಿಕರು ಭಯಭೀತರಾಗಿದ್ದರು. ಹುಲಿ ಸೆರೆಹಿಡಿದಿರುವುದರಿಂದ ಸಾರ್ವಜನಿಕರು ಸಮಾಧಾನದ ನಿಟ್ಟೂಸಿರು ಬಿಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net