ಸೋಮವಾರ ಅಮಾವಾಸ್ಯೆ; ಸಿದ್ದಾಪುರದಲ್ಲಿ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ

2002-SDP-SHARANAPPA 1
Published on

ಸಿದ್ದಾಪುರ: ಮಹಾಶಿವರಾತ್ರಿ ಅಮಾವಾಸ್ಯೆ ನಿಮಿತ್ತ ಗ್ರಾಮದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸೋಮವಾರ ವಿಶೇಷ ಪೊಜೆ ನಡೆಯಿತು.

ಬೆಳಗ್ಗೆ ಮಂಗಳಾರತಿ, ನಾನಾ ಬಗೆಯ ಪೊಜೆ ಪುನಸ್ಕಾರ, ಬಿಲ್ವಾರ್ಚನೆ, ಎಲೆ ಚಟ್ಟೆ ಅಲಂಕಾರ ಸೇರಿ ಇತರ ಕಾರ್ಯಕ್ರಮಗಳು ನಡೆದವು. ಅಮಾವಾಸ್ಯೆ ನಿಮಿತ್ತ ಭಕ್ತರಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆ ಉಚ್ಚಾಯ ಜರುಗಿತು. ಕೊಟ್ನೇಕಲ್, ಬರಗೂರು, ಗುಂಡೂರು, ಸಿದ್ದಾಪುರ ಸೇರಿ ಇತರೆ ಗ್ರಾಮಗಳ ಭಕ್ತರು ಆಗಮಿಸಿದ್ದರು.

ಗ್ರಾಮದ ರಾಮಲಿಂಗೇಶ್ವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ರುದ್ರಾಭಿಷೇಕ, ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಇದಕ್ಕೂ ಮುನ್ನಾದಿನವಾದ ಭಾನುವಾರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗ್ರಾಮದ ಆರಾಧ್ಯ ದೈವ ವಿರುಪಯ್ಯ ತಾತಹಾಗೂ ಬಸವಣ್ಣಯ್ಯ ತಾತನ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಕಾಯಿ, ಹಣ್ಣು ಸಮರ್ಪಿಸಿದರು.

2002-ಎಸ್ಡಿಪಿ-ಶರಣಪ್ಪ 1
ಸಿದ್ದಾಪುರದಲ್ಲಿ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಮಾಡಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net