ಮತಗಟ್ಟೆಗಳಿಗೆ ತಹಸೀಲ್ದಾರ್ ಭೇಟಿ, ಪರಿಶೀಲನೆ

MATAGATTE VISIT
ಸಿದ್ದಾಪುರ ಹೋಬಳಿಯ ಮತಗಟ್ಟೆಗಳಿಗೆ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂದಾಯ ನಿರೀಕ್ಷಕ ಶರಣಪ್ಪ, ಗ್ರಾಮ ಆಡಳಿತಾಧಿಕಾರಿಗಳಾದ ಮರಳಸಿದ್ದಪ್ಪ, ಯಂಕೋಬ, ಕರಿಬಸಪ್ಪ ಇದ್ದರು.
Published on

ಸಿದ್ದಾಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದಾಪುರ ಹೋಬಳಿ ವ್ಯಾಪ್ತಿಯ ಮತಗಟ್ಟೆಗಳಿಗೆ ಭಾನುವಾರ ತಹಸೀಲ್ದಾರ್ ಎಂ. ಕುಮಾರಸ್ವಾಮಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಸಿದ್ದಾಪುರ ಹೊಬಳಿ ವ್ಯಾಪ್ತಿಯಲ್ಲಿ ಒಟ್ಟು 42 ಮತಗಟ್ಟೆಗಳು ಬರುತ್ತವೆ. ಎಲ್ಲವನ್ನೂ ವೀಕ್ಷಣೆ ಮಾಡಲಾಗಿದೆ. ಕೆಲ ಮತಗಟ್ಟೆ ಕೇಂದ್ರಗಳಲ್ಲಿ ಈಗಾಗಲೇ ಮೂಲ ಸೌಕರ್ಯಗಳಿದ್ದು, ಹಲವಕ್ಕೆ ಕೊರತೆಯಿದೆ. ಇವುಗಳಿಗೆ ಕೂಡಲೇ ಸೌಕರ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಿದ್ದಾಪುರ ಹೊಬಳಿಯ ಕಂದಾಯ ನಿರೀಕ್ಷಕ ಶರಣಪ್ಪ, ಗ್ರಾಮ ಆಡಳಿತಾಧಿಕಾರಿಗಳಾದ ಮರಳಸಿದ್ದಪ್ಪ, ಯಂಕೋಬ, ಕರಿಬಸಪ್ಪ, ವನಜಾಕ್ಷಿ, ಹನುಮಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net