ಗೊಲ್ಲರಿಗೆ ಬರದ ಬರೆ, ಜಮೀನುಗಳಲ್ಲಿ ಮೇವು ಕಣ್ಮರೆ

BARAGALA
ಸಿದ್ದಾಪುರ ಸಮೀಪದ ಹೊರವಲಯದಲ್ಲಿ ಹಸುಗಳು ಮೇಯಿತ್ತಿರುವುದು.
Published on

ಸಿದ್ದಾಪುರ: ಭೀಕರ ಬರಕ್ಕೆ ಅನ್ನದಾತರು ಕಂಗಾಲಾಗಿದ್ದು, ನೂರಾರು ಹಸುಗಳನ್ನು ಹೊಂದಿರುವ ಗೊಲ್ಲರು ರಾಸುಗಳ ಹೊಟ್ಟೆ ತುಂಬಿಸಲು ಹರಸಾಹಸ ಪಡುತ್ತಿದ್ದಾರೆ.

ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಕಾರಟಗಿ ತಾಲೂಕಿನ ನೀರಾವರಿ ಪ್ರದೇಶದಲ್ಲಿ ಈ ಬಾರಿ ಕೃಷಿ ಚಟುವಟಿಕೆಗಳು ಕುಂಟಿತಗೊಂಡಿದ್ದು, ಬಿಸಿಲಿನ ಪ್ರಖರತೆಗೆ ಭೂಮಿ ಬಿರುಕು ಬಿಟ್ಟಿದೆ. ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಜಮೀನುಗಳಲ್ಲಿ ಮೇವು ಕಣ್ಮರೆಯಾಗಿದೆ.

ಹೀಗಾಗಿ ಗೊಲ್ಲರ ಸಮುದಾಯಕ್ಕೆ ಹಸುಗಳನ್ನು ಮೇಯಿಸಲು ಮೇವಿನ ಸಮಸ್ಯೆ ಎದುರಾಗಿದೆ. ಜಮೀನುಗಳಲ್ಲಿ ಬೋರ್‌ವೆಲ್ ಹೊಂದಿರುವ ಕೆಲ ರೈತರು ಮಾತ್ರ ಮುಂದಿನ ಬೆಳೆಗೆ ಅನುಕೂಲವಾಗಲೆಂದು ಜ್ಯೂನಿ, ಪಿಳಿಪೀಸಿರು ಬೆಳೆದಿದ್ದಾರೆ. ಆದರೆ, ಗೊಲ್ಲರು ಹಸುಗಳನ್ನು ಅಲ್ಲಿ ಮೇಯಿಸಲು ಎಕರೆಗೆ ಸಾವಿರಾರು ರೂ. ಕೇಳುತ್ತಿರುವುದು ಸಮಸ್ಯೆ ತಂದೊಡ್ಡಿದೆ.

ಬರ ಇರುವುದರಿಂದ ಕೃಷಿ ಚಟುವಟಿಕೆಗಳು ನಡೆದಿಲ್ಲ. ನೀರಾವರಿ ಪ್ರದೇಶಗಳಲ್ಲಿ ಸಹ ಹಸುಗಳನ್ನು ಮೇಯಿಸಲು ಮೇವು ದೊರೆಯುತ್ತಿಲ್ಲ. ನೂರಾರು ಹಸುಗಳನ್ನು ಸಾಕಿಕೊಂಡಿದ್ದು, ನಿತ್ಯ ಅವುಗಳ ಹೊಟ್ಟೆ ತುಂಬಿಸಲು ಹರಸಾಹಸ ಪಡುವಂತಾಗಿದೆ. ಅಡವಿ-ಅಡವಿ ಅಲೆದಾಡಿ ಹಸುಗಳ ಹೊಟ್ಟೆ ತುಂಬಿಸಲಾಗುತ್ತಿದೆ.ವೆಂಕಟೇಶ್ಹಸುಗಳನ್ನು ಕಾಯುವ ಯವಕ, ಕನಕಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net