ಷಾರ್ಟ್ ಸರ್ಕ್ಯೂಟ್‌ನಿಂದ ಗುಡಿಸಲು ಭಸ್ಮ

06102021 Siddapur tent burn
Published on


ಸಿದ್ದಾಪುರ: ಸಮೀಪದ ಜಮಾಪುರದಲ್ಲಿ ಮಂಗಳವಾರ ವಿದ್ಯುತ್ ಸರ್ಕ್ಯೂಟ್‌ನಿಂದ ವೆಂಕಟ ರಾವ್ ಎಂಬುವವರ ಗುಡಿಸಲು ಸುಟ್ಟಿದೆ. ಅವಘಡದಲ್ಲಿ ಒಂದು ಎಮ್ಮೆ ಮೃತಪಟ್ಟಿದ್ದು, 4 ಎಮ್ಮೆ ಹಾಗೂ 4 ಟಗರು ಮರಿಗಳು ಗಾಯಗೊಂಡಿವೆ.

ಧಾನ್ಯ ಮತ್ತು ದಿನಬಳಕೆ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ತಹಸೀಲ್ದಾರ್ ರವಿ ಅಂಗಡಿ ಭೇಟಿ ನೀಡಿದ್ದರು. ಪರಿಹಾರ ಒದಗಿಸುವಂತೆ ಪಶುಪಾಲನಾ ಇಲಾಖೆ ಅಧಿಕಾರಿಗೆ ತಹಸೀಲ್ದಾರ್ ಸೂಚಿಸಿದರು. ಗ್ರೇಡ್-2 ತಹಸೀಲ್ದಾರ್ ವಿಶ್ವನಾಥ ಮುರಡಿ, ಗುಡಿಸಲು ಮಾಲೀಕ ವೆಂಕಟ ರಾವ್, ತಹಸಿಲ್ ಕಚೇರಿ ಸಿಬ್ಬಂದಿ ಹಾಗೂ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net