ಮಕ್ಕಳನ್ನು ಮೊಬೈಲ್ ಫೋನ್​ನಿಂದ ದೂರವಿಡಬೇಕು

10-SDP-1
Published on

ಸಿದ್ದಾಪುರ: ಮಕ್ಕಳಿಗೆ ಶಿಕ್ಷಣದ ಜತೆಗೆ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು. ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್ ಫೋನ್​ನಿಂದ ದೂರವಿಡಬೇಕು. ಮಕ್ಕಳಿಗೆ ನೀಡುವ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರವೇ ದೊಡ್ಡ ಆಸ್ತಿಯಾಗುತ್ತದೆ. ಜನರು ನಮ್ಮ ಮೇಲೆ ಇಟ್ಟ ವಿಶ್ವಾಸಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಕಡಕೇರಿಯ ಸಹಿಪ್ರಾ ಶಾಲೆಯ ವಾರ್ಷಿಕೋತ್ಸವದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧ ಕಡಕೇರಿಯ ಶಶಿಕುಮಾರ ನಾಯ್ಕ ಹಾಗೂ ಕಡಕೇರಿ ಶಾಲೆಗೆ ವಿವಿಧ ವಸ್ತುಗಳನ್ನು ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಿ ಅವರು ಬುಧವಾರ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಟಿ. ವಾಸು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಉಲ್ಲಾಸ ಗೌಡರ್, ಉಪಾಧ್ಯಕ್ಷೆ ಹೇಮಾವತಿ ನಾಯ್ಕ, ಸದಸ್ಯರಾದ ಕೃಷ್ಣಮೂರ್ತಿ ಕಡಕೇರಿ, ವಾಸಂತಿ ಹಸ್ಲರ್, ಬೇಡ್ಕಣಿ ಸೊಸೈಟಿ ಸದಸ್ಯ ಬಾಬು ನಾಯ್ಕ, ಬೇಡ್ಕಣಿ ಜನತಾ ವಿದ್ಯಾಲಯದ ಅಧ್ಯಕ್ಷ ವಿ.ಎನ್. ನಾಯ್ಕ, ಕಡಕೇರಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿಶ್ವೇಶ್ವರ ಹೆಗಡೆ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಎಸ್​ಡಿಎಂಸಿ ಉಪಾಧ್ಯಕ್ಷೆ ವಿನುತಾ ಶಾಸ್ತ್ರಿ, ಶಿಕ್ಷಕ ಎಂ.ಕೆ. ನಾಯ್ಕ, ಮಂಜುಳಾ ಪಟಗಾರ ಇತರರಿದ್ದರು.

ಮುಖ್ಯ ಶಿಕ್ಷಕಿ ಮಾಯಾ ಭಟ್ ಸ್ವಾಗತಿಸಿದರು. ಶಿಕ್ಷಕಿ ಗಾಯತ್ರಿ ನಾಯ್ಕ ವರದಿ ವಾಚಿಸಿದರು. ಶಿಕ್ಷಕಿ ಸುಮತಿ ನಾಯ್ಕ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ 10ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕ ಕೇಶವ ನಾಯ್ಕ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net