ಸರಳ ರೀತಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ

19092021 Siddapur Ganesh visrjana
Published on

ಸಿದ್ದಾಪುರ: ಗ್ರಾಮದಲ್ಲಿ ಶನಿವಾರ ಸರಳ ರೀತಿಯಿಂದ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು. ವಿಸರ್ಜನೆಗೂ ಮುನ್ನ ವಿಘ್ನ ನಿವಾರಕನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ನಾನಾ ಬಗೆಯ ಪುಷ್ಪ, ತುಳಸಿ, ಗರಿಕೆಯಿಂದ ಸಿಂಗರಿಸಲಾಯಿತು. ಮೆರವಣಿಗೆಯಲ್ಲಿ ಸಾಗಿದ ಟ್ರಾೃಕ್ಟರ್ ಅನ್ನು ಬಲೂನುಗಳಿಂದ ಅಲಂಕಾರ ಮಾಡಲಾಗಿತ್ತು. ನಿಷೇಧ ಹಿನ್ನೆಲೆಯಲ್ಲಿ ಡಿಜೆ ಬಳಕೆ ಮಾಡಲಿಲ್ಲ. ಪಂಪನಗೌಡ, ಪ್ರವೀಣ ಕುಮಾರ್ ಹೊಸಮನಿ, ಶಂಕರಗೌಡ, ಸೋಮಶೇಖರ ಮಾಲಿ ಪಾಟೀಲ್, ವೀರನಗೌಡ, ಶಿವನಗೌಡ ಸಂಕನಾಳ, ಮಂಜುನಾಥ, ಮಲ್ಲಿಕಾರ್ಜುನ ಎಲೆಗಾರ್, ಚನ್ನಬಸವ ಗುನ್ನಳ್ಳಿ, ಶ್ರೀಕಾಂತ್ ಹೊಸಮನಿ, ದೇವರಾಜ್ ಹುಡೇದ್, ಶ್ರೀಧರ್ ಕರ್ಕಿಹಳ್ಳಿ, ದಯಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net