ಗುಂಡೂರು ಕ್ಯಾಂಪ್‌ನ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ

MOSALE
ಸಿದ್ದಾಪುರ ಸಮೀಪದ ಗುಂಡೂರು ಕ್ಯಾಂಪ್‌ನ ಜಮೀನಿನಲ್ಲಿ ಮೊಸಳೆ ಕಾಣಿಸಿಕೊಂಡಿರುವುದು.
Published on

ಸಿದ್ದಾಪುರ: ಸಮೀಪದ ಗುಂಡೂರು ಕ್ಯಾಂಪ್‌ನ ಜಮೀನೊಂದರಲ್ಲಿ ಮೊಸಳೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ರಾತ್ರಿ ವೇಳೆ ಭತ್ತದ ಗದ್ದೆಗೆ ನೀರು ಹಾಯಿಸಲು ತೆರಳಿದ್ದ ರೈತರಿಗೆ ಮೊಸಳೆ ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ರಾತ್ರಿ ಆಗಿದ್ದರಿಂದ ಮೊಸಳೆ ಯಾವ ಕಡೆ ಹೋಗಿದೆ ಎನ್ನುವುದು ತಿಳಿದಿಲ್ಲ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಜಮೀನಲ್ಲಿ ಮೊಸಳೆ ಓಡಾಟವಿಲ್ಲ. ಜನರು ಭಯ ಪಡುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿ ಸುಭಾಷ್‌ಚಂದ್ರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net