ಅನ್ನದಾತರು ನಿತ್ಯ ಕಾಯಕ ಜೀವಿಗಳು ಎಂದು ಬಣ್ಣಿಸಿದ ಶಾಸಕ ಬಸವರಾಜ ದಢೇಸುಗೂರು

03042022 Siddapur formars union inguration
Published on

ಸಿದ್ದಾಪುರ: ಅನ್ನದಾತರು ಈ ನಾಡಿನ ನಿಜವಾದ ಬೆನ್ನೆಲುಬು ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

ಗ್ರಾಮದಲ್ಲಿ ರೈತ ಸಂಘ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಫಲ ನಿರೀಕ್ಷಿಸದೆ ಕಾಯಕ ಮಾಡುವ ಜೀವಿಗಳಿದ್ದರೆ ಅದು, ರೈತಾಪಿ ವರ್ಗ. ಇಂದು ಅನ್ನದಾತ ಬೆಳೆ ಬೆಳೆಯುವುದನ್ನು ಕೈಬಿಟ್ಟರೆ, ನಾಡು ಸಂಕಷ್ಟ್ಟ ಪಡಬೇಕಾಗುತ್ತದೆ. ಅನ್ನದಾತರು ನಿತ್ಯ ಕಾಯಕ ಜೀವಿಗಳು. ಯುಗಾದಿ ಹಬ್ಬದಿಂದ ಗ್ರಾಮ ಘಟಕ ಉದ್ಘಾಟನೆಯಾಗಿದ್ದು, ಸಮಾಜಮುಖಿ ಕಾರ್ಯಗಳನ್ನು ಮಾಡಿ ಎಂದು ಸಲಹೆ ನೀಡಿದರು.

ಕಾಡಾ ಅಧ್ಯಕ್ಷ ಬಿ.ಎಚ್.ಎಂ. ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರಗೌಡ ಮುಸ್ಟೂರು, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ಭಾವಿ, ಮುಖಂಡ ನಾಗೇಶ್ ಸಿಂಧನೂರು, ರೈತ ಸಂಘದ ಅಧ್ಯಕ್ಷ ಶರಣಪ್ಪ ದೊಡ್ಮನಿ, ಪದಾಧಿಕಾರಿಗಳಾದ ಹನುಮಂತಪ್ಪ ಉಳೇನೂರು, ಶರಣಪ್ಪ ಸುಗ್ನಳ್ಳಿ, ನಾರಾಯಣ ಪಾಲಕ್ಷಿಗೌಡ, ಅಕ್ಕಮಹಾದೇವಿ, ದುರ್ಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net