

ಸಿದ್ದಾಪುರ: ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದೊಡ್ಮನೆ ಅವರ ಜನ್ಮದಿನೋತ್ಸವದ ಅಂಗವಾಗಿ ರಾಷ್ಟ್ರೀಯ ಚಿಂತನೆ ರಾಮಕೃಷ್ಣ ಹೆಗಡೆ ಮತ್ತು ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಆ. 29ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ ಎಂದು ರಾಮಕೃಷ್ಣ ಹೆಗಡೆ ಚಿರಂತನದ ಮುಖ್ಯಸ್ಥ ಡಾ. ಶಶಿಭೂಷಣ ವಿ. ಹೆಗಡೆ ದೊಡ್ಮನೆ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜನ್ಮದಿನೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.
2005ರಿಂದ ಪ್ರತಿವರ್ಷ ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ ಅಂಗವಾಗಿ ಅವರ ವ್ಯಕ್ತಿತ್ವದ ವಿವಿಧ ಆಯಾಮದ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ವರ್ಷದ ಸಮಾರಂಭದಲ್ಲಿ ಹೆಗಡೆ ಅವರು ಮಹಿಳಾ ಸಬಲೀಕರಣದ ಅಂಗವಾಗಿ ಯಾವ ಯಾವ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದ್ದರು ಎಂಬುದನ್ನು ಬಿಂಬಿಸಲಾಗುವುದು ಎಂದರು. ಪ್ರಮೋದ ಹೆಗಡೆ ಯಲ್ಲಾಪುರ ದಿಕ್ಸೂಚಿ ಭಾಷಣ ಮಾಡುವರು. ಡಾ. ಶಶಿಭೂಷಣ ವಿ. ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸುವರು. ಮಹಿಳಾ ಸಬಲೀಕರಣ ಕುರಿತು ಖ್ಯಾತ ಲೇಖಕಿ ಭುವನೇಶ್ವರಿ ಹೆಗಡೆ ಉಪನ್ಯಾಸ ನೀಡುವರು. ಜಿಪಂ ಮಾಜಿ ಸದಸ್ಯೆ ಸುಧಾ ಗೌಡ ಉಪಸ್ಥಿತರಿರುವರು. ಸಿದ್ದಾಪುರ ಶ್ರೇಯಸ್ ಆಸ್ಪತ್ರೆಯ ಡಾ. ಸುಮಂಗಲಾ ವೈದ್ಯ, ಶಿಕ್ಷಣತಜ್ಞೆ ಲತಾ ಮಂಗಲದಾಸ ಕಾಮತ ಆವರ್ಸಾ, ನಿವೃತ್ತ ಪ್ರಾಚಾರ್ಯೆ ಜಯಂತಿ ಶಾನಭಾಗ ಹಾಗೂ ಪಾರಂಪರಿಕ ಪ್ರಸೂತಿ ತಜ್ಞೆ ಕೆರಿಯಮ್ಮ ನಾಯ್ಕ ಕವಂಚೂರು ಅವರನ್ನು ಸನ್ಮಾನಿಸಲಾಗುತ್ತದೆ ಎಂದರು. ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯದರ್ಶಿ ಕೆ.ಐ. ಹೆಗಡೆ ತಾರಗೋಡ ಇದ್ದರು.