ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ಅಗತ್ಯ

29-SDP-MLA
Published on

ಸಿದ್ದಾಪುರ: ಅಭಿವೃದ್ಧಿ ಎನ್ನುವುದು ನಿರಂತರ ವಾಗಿರುವಂತಹುದು. ಇದನ್ನು ಎಲ್ಲರೂ ಸೇರಿ ಮಾಡಬೇಕಾಗಿದೆ. ಸರ್ಕಾರದೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಮಳೆಯಿಂದಾಗಿ ಮನೆ ಕುಸಿದು ಹಾನಿ ಸಂಭವಿಸಿದ ತಾಲೂಕಿನ ಹಳಿಯಾಳದ ಮಹಾಲಕ್ಷ್ಮೀ ನಾರಾಯಣ ನಾಯ್ಕ ಹಾಗೂ ಹೊನ್ನೆಹದ್ದದ ಮಂಜಿ ಬಂಗಾರ್ಯ ಚನ್ನಯ್ಯ ಅವರ ಮನೆಯನ್ನು ಶನಿವಾರ ವೀಕ್ಷಿಸಿ ನಂತರ ಹೊನ್ನೆಹದ್ದದ ನರಸಿಂಹ ಹೆಗಡೆ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಮನೆ ಕಳೆದುಕೊಂಡ ಇಬ್ಬರಿಗೂ ಸರ್ಕಾರದಿಂದ ಮನೆ ಕಟ್ಟಿಸಿಕೊಡಲಾಗುವುದು. ಅಲ್ಲಿಯವರೆಗೆ ಸ್ಥಳೀಯ ಗ್ರಾಪಂ ಹಾಗೂ ದಾನಿಗಳು ಅವರ ಅವಶ್ಯಕತೆಯನ್ನು ಪೂರೈಸುವುದಕ್ಕೆ ಸಹಕರಿಸಬೇಕು. ತಾಲೂಕಿನಲ್ಲಿ ಅಭಿವೃದ್ಧಿ ಆಗುವುದು ಬಹಳಷ್ಟಿದೆ. ಅವುಗಳನ್ನು ಹಂತ ಹಂತವಾಗಿ ಮಾಡಲಾಗುವುದು. ರಾಜ್ಯ ಸರ್ಕಾರದ ಯೋಜನೆಗಳನ್ನು ಎಲ್ಲರೂ ಪಡೆಯಬೇಕು. ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸ್ವೀಕೃತಿ ನಡೆಯುತ್ತಿದ್ದು ಅರ್ಹ ಫಲಾನುಭವಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಬೇಕು ಎಂದರು.
ಹೊನ್ನೆಹದ್ದಕ್ಕೆ ಕುಡಿಯುವ ನೀರಿನ ಹಾಗೂ ಸರ್ವಋತು ರಸ್ತೆಯ ಬಗ್ಗೆ ಸಿ.ಎನ್. ಹೆಗಡೆ ಹೊನ್ನೆಹದ್ದ ಪ್ರಸ್ತಾಪಿಸಿದರು. ಆಗ ಅದನ್ನು ಸಹ ಮಾಡಿಕೊಡಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಭರವಸೆ ನೀಡಿದರು.
ಮನವಿ: ಹಾರ್ಸಿಕಟ್ಟಾ ಗ್ರಾಪಂ ಸದಸ್ಯ ಅಶೋಕ ನಾಯ್ಕ ಹಾಗೂ ಕಾಂಗ್ರೆಸ್ ಪ್ರಮುಖ ನೂರ್ಲಾಮಿನ್‌ಸಾಬ್ ಅವರು ಹಾರ್ಸಿಕಟ್ಟಾಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಸ್ತೆ ವ್ಯವಸ್ಥೆ ಸರಿಪಡಿಸಿಕೊಡುವಂತೆ ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ವಿದ್ಯಾ ಪಿ.ನಾಯ್ಕ, ಉಪಾಧ್ಯಕ್ಷ ಶಾಂತಕುಮಾರ ಪಾಟೀಲ, ಸದಸ್ಯರಾದ ಅಶೋಕ ನಾಯ್ಕ, ಸಿದ್ದಾರ್ಥ ಗೌಡರ್, ಸರೋಜಾ ನಾಯ್ಕ, ಅಕ್ಷತಾ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಎಂ.ಹೆಗಡೆ, ಕೆ.ಜಿ. ನಾಗರಾಜ, ಎಸ್.ಆರ್. ಹೆಗಡೆ ಕುಂಬಾರಕುಳಿ, ನೂರ್ಲಾಮಿನ್‌ಸಾಬ್, ಕಮಲಾಕರ ನಾಯ್ಕ, ಎಂ.ಎಸ್. ಹೆಗಡೆ ಕಲ್ಮನೆ, ಶಶಿಧರ ಗೌಡರ್, ಅಬ್ದುಲ್‌ಸಾಬ್ ಹೇರೂರು, ಗಾಂಧೀಜಿ ಆರ್. ನಾಯ್ಕ, ಎನ್.ಟಿ. ನಾಯ್ಕ, ಅಣ್ಣಪ್ಪ ಶಿರಳಗಿ, ತಹಸೀಲ್ದಾರ್ ಮಂಜುನಾಥ ಮುನ್ನೊಳಿ, ಡಾ. ವಿವೇಕ ಹೆಗಡೆ, ಪಿಡಿಒ ರಾಜೇಶ ನಾಯ್ಕ ಇತರರಿದ್ದರು.
ಸಹಾಯಧನ ವಿತರಣೆ: ಹಾರ್ಸಿಕಟ್ಟಾದ ಅಂಗವಿಕಲ ಶುಕೂರ್ ಸಾಬ್, ಯಶವಂತ ನಾಯ್ಕ ಹಾಗೂ ಮಾದಲಮನೆ ಜನಾರ್ದನ ಗೌಡ ಅವರ ಮನೆಗೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ, ಅಲ್ಲಿಯ ಅಂಗವಿಕಲರ ಯೋಗಕ್ಷೇಮ ವಿಚಾರಿಸಿ ವೈಯಕ್ತಿಕವಾಗಿ ಸಹಾಯಧನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net