ಕೊಡುಗೆಗಳಿಂದ ಕಲಿಕಾ ಪೂರಕ ವಾತಾವರಣ

UDGHATANE
ಸಿದ್ದಾಪುರ ಸಮೀಪದ ಮುಸ್ಟೂರು ಅಂಜೂರಿ ಕ್ಯಾಂಪ್‌ನ ಶಾಲೆಯಲ್ಲಿ ಅಮೃತ ಫೌಂಡೇಷನ್‌ನಿಂದ ಹಮ್ಮಿಕೊಂಡಿದ್ದ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಬಿಇಒ ವೆಂಕಟೇಶ ರಾಮಚಂದ್ರಪ್ಪ ಉದ್ಘಾಟಿಸಿದರು. ಫೌಂಡೇಷನ್‌ನ ನಿರ್ದೇಶಕ ವಿಕ್ರಮ್ ಚೌಧರಿ, ಪ್ರಮುಖರಾದ ನವೀನ್ ಬಾಲು ಪ್ರತಿಪಾಟಿ, ಎಂ. ರವಿ ಇತರರಿದ್ದರು.
Published on

ಸಿದ್ದಾಪುರ: ಮಕ್ಕಳು ಶಾಲೆ ಹಾಗೂ ಗ್ರಾಮದ ಕೀರ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಬಿಇಒ ವೆಂಕಟೇಶ ರಾಮಚಂದ್ರಪ್ಪ ಹೇಳಿದರು.

ಗ್ರಾಮ ಸಮೀಪದ ಮುಸ್ಟೂರು ಅಂಜೂರಿ ಕ್ಯಾಂಪ್‌ನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಮೃತ್ ಫೌಂಡೇಷನ್ ಬೆಂಗಳೂರು ಅವರಿಂದ ಸೋಮವಾರ ಹಮ್ಮಿಕೊಂಡಿದ್ದ ದೇಣಿಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಾನಿಗಳ ಕೊಡುಗೆ ಅಪಾರವಾದದ್ದು. ಶಾಲೆಗೆ ಈ ರೀತಿಯ ಕೊಡುಗೆಯು ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಉತ್ತಮ ಅಂಕಗಳನ್ನು ಗಳಿಸುವ ಜತೆಗೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆರೂವರೆ ಲಕ್ಷ ರೂ. ಮೌಲ್ಯದ 20 ಡೆಸ್ಕ್, 4 ಆಫೀಸ್ ಟೇಬಲ್, 10 ಚೇರ್, ಗ್ರೀನ್ ಬೋರ್ಡ್, ಎಲ್ಲ ಮಕ್ಕಳಿಗೂ ಸ್ಕೂಲ್ ಬ್ಯಾಗ್, ನೋಟ್ ಬುಕ್, 250 ಲೀಟರ್ ವಾಟರ್ ಪ್ಯೂರಿಫೈಯರ್, ಕ್ರೀಡೆ ಹಾಗೂ ಕಲಿಕಾ ಸಾಮಗ್ರಿಗಳನ್ನು ದೇಣಿಗೆ ನೀಡಲಾಯಿತು.

ಫೌಂಡೇಷನ್‌ನ ನಿರ್ದೇಶಕ ವಿಕ್ರಮ್ ಚೌಧರಿ, ಸ್ಥಳೀಯರಾದ ನವೀನ್ ಬಾಲು ಪ್ರತಿಪಾಟಿ, ವಿಮಲಾ ಪ್ರತಿಪಾಟಿ, ಸ್ವಾತಿ, ಸಂಯೋಜಕ ಎಂ.ರವಿ, ಮುನಿರಾಬಾದ್ ಡಯಟ್‌ನ ಹಿರಿಯ ಉಪನ್ಯಾಸಕ ಸೋಮಶೇಖರಗೌಡ ಪಾಟೀಲ್, ಮುಸ್ಟೂರು ಗ್ರಾಪಂ ಅಧ್ಯಕ್ಷ ಸುರೇಶ್, ಮುಖ್ಯ ಶಿಕ್ಷಕ ವೈ. ಕೃಷ್ಣಪ್ಪ, ಶಿಕ್ಷಕರಾದ ಸಂತೋಷ್, ಶರಣಗೌಡ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net