ಚೆಟ್ಟಳ್ಳಿಯಲ್ಲಿ ನಡೆದ ಕಲಿಕೋತ್ಸವ

24mdkj2 - Copy
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಚೆಟ್ಟಳ್ಳಿ ಕ್ಲಸ್ಟರ್ ಮಟ್ಟದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಕಲಿಕೋತ್ಸವಕ್ಕೆ ಚೆಟ್ಟಳ್ಳಿಯಲ್ಲಿ ಸೋಮವಾರ ನಡೆಯಿತು. ಸಮಗ್ರ ಶಿಕ್ಷಣ ಯೋಜನೆಯಡಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಚೆಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಕಲಿಕೋತ್ಸವವು ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆ. ಮಕ್ಕಳನ್ನು ವಿವಿಧ ಚಟುವಟಿಕೆ ಮೂಲಕ ಕಲಿಸುವ ಉದ್ದೇಶ ಹೊಂದಿದೆ. ಮಕ್ಕಳು ಸಂಭ್ರಮ ಸಡಗರದಿಂದ ಕಲಿಯುವ ಪಾಠಗಳು ಅವರ ಮನದಾಳದಲ್ಲಿ ಬಹಳ ಕಾಲ ಉಳಿಯಲಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇಸಿಒ ಮಾರುತಿ ಅರೇರ ಹೇಳಿದರು.

ಅಭ್ಯತ್‌ಮಂಗಲ, ಗುಹ್ಯ ಮಾದರಿ ಪ್ರಾಥಮಿಕ ಶಾಲೆ, ಸಿದ್ದಾಪುರ ಮಲಯಾಳಂ ಶಾಲೆ ಸಿದ್ದಾಪುರ, ಚೆಟ್ಟಳ್ಳಿ ಆರ್‌ಎಸ್ ಶಾಲೆ, ಕಂಡಕ್ಕರೆ ಮತ್ತು ಚೆಟ್ಟಳ್ಳಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾವರಣದಿಂದ ಮೆರವಣಿಗೆ ತೆರಳಿದ ವಿದ್ಯಾರ್ಥಿಗಳು ಚೆಟ್ಟಳ್ಳಿ ಪಟ್ಟಣದಲ್ಲಿ ಕಲಾ ಕವಾಯತ್ತು ಪ್ರದರ್ಶನ ತೋರಿದರು. ನಾಲ್ಕು ಕಾರ್ನರ್‌ನಲ್ಲಿ ನಡೆಯುವ ಕಲಿಕೋತ್ಸವದಲ್ಲಿ, ಆಡು ಹಾಡು, ಕಾಗದ ಕತ್ತರಿ ಬಣ್ಣ, ಮಾಡು ಆಡು ಮತ್ತು ಊರು ಸುತ್ತೋಣ ಎಂಬ ವಿಭಾಗದಲ್ಲಿ ಮಕ್ಕಳಿಗೆ ತರಬೇತಿ ನೀಡಿ ಕಲಿಸುವ ಪ್ರಯೋಗ ಮಾಡ ಲಾಗಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸುನಿತಾ ಮಂಜುನಾಥ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಮುತ್ತಪ್ಪ, ಉಪಾಧ್ಯಕ್ಷೆ ವಿಮಲಾಕ್ಷಿ, ಸದಸ್ಯರಾದ ಮಾಲಾಶ್ರೀ, ಸಿಂಧು, ಸುಮಿತ್ರ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಮುಖ್ಯಶಿಕ್ಷಕಿ ರಮಾ, ಕ್ಲಸ್ಟರ್ ಸಂಪನ್ಲೂಲ ವ್ಯಕ್ತಿ ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net