

ಸಿದ್ದಾಪುರ: ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಬೆಳೆಯನ್ನು ಎಲ್ಲ ಕಡೆ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಿದ್ದಾಪುರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿ ಮಾತನಾಡಿದರು. ಕಾರಟಗಿ ತಾಲೂಕಿನಲ್ಲಿ ಮಳೆಯ ಹೊಡೆತಕ್ಕೆ ಭತ್ತದ ಬೆಳೆ ನೆಲಕ್ಕಚ್ಚಿದೆ. ಕಾರಟಗಿಯಲ್ಲಿ ಹೋಬಳಿಯಲ್ಲಿ 90 ಹೆಕ್ಟೇರ್ ಹಾಗೂ ಸಿದ್ದಾಪುರ ಹೋಬಳಿ ವ್ಯಾಪ್ತಿಯಲ್ಲಿ 858 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಈಗಾಗಲೇ ಅಪಾರ ಪ್ರಮಾಣದಲ್ಲಿ ಬೆಳೆ ನೆಲಕ್ಕಚ್ಚಿದ್ದು, ಭತ್ತದ ತೆನೆ ನೀರಿನಲ್ಲಿ ತೊಯ್ದು ಮೊಳಕೆಯೊಡೆಯುತ್ತಿದೆ. ಇನ್ನೂ ಕೆಲವೆಡೆ ಭತ್ತ ಕಟಾವು ಯಂತ್ರಕ್ಕೆ ಕಟಾವು ಮಾಡಲು ಸಾಧ್ಯವಾಗದ ರೀತಿಯಲ್ಲಿ ಬೆಳೆ ನೆಲಕಗಕ್ಕುರುಳಿದೆ. ಹೀಗಾಗಿ ರೈತರಿಗೆ ಸಾಕಷ್ಟು ನಷ್ಟ ಉಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಜಂಟಿಯಾಗಿ ಸಮೀಕ್ಷೆ ಮಾಡಿ, ವರದಿ ನೀಡಲು ಸೂಚಿರುವೆ ಎಂದರು.
ಉಳೇನೂರು, ಈಳಿಗನೂರು, ಸಿದ್ದಾಪುರ, ಮುಸ್ಟೂರು ಸೇರಿ ಇತರೆಡೆ ರೈತರ ಜಮೀನುಗಳಿಗೆ ತೆರಳಿ ಬೆಳೆಹಾನಿ ವೀಕ್ಷಿಸುತ್ತಿದ್ದೇನೆ. ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸಿ ರೈತರಿಗೆ ಬೆಳೆಹಾನಿ ಪರಿಹಾರ ಕೊಡಿಸಲು ಶ್ರಮಿಸಲಾಗುವುದು. ಅಲ್ಲದೇ, ಅಧಿಕಾರಿಗಳು ಎಲ್ಲೆಲ್ಲಿ ಬೆಳೆಹಾನಿಯಾಗಿದೆ ಎಲ್ಲವನ್ನೂ ವರದಿ ನೀಡಬೇಕು ಎಂದು ಖಡಕ್ಕಾಗಿ ಸೂಚಿಸಿದರು.
ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಹೊಸಮನಿ, ತಾಪಂ ಮಾಜಿ ಸದಸ್ಯ ಬಸವರಾಜ ನೀರಗಂಟಿ, ಮುಖಂಡರಾದ ಚನ್ನಬಸಪ್ಪ ಸುಂಕದ್, ಸಿದ್ದನಗೌಡ, ನಾಗೇಶ್ ಸಿಂಧನೂರು, ಬೀರಪ್ಪ, ಅಬ್ದುಲ್ ರೌಫ್, ಪ್ರಕಾಶ್ ಭಾವಿ, ದೊಡ್ಡಪ್ಪ ದೇಸಾಯಿ, ಪ್ರಮೋದ್ ಭಾವಿ, ಅಮರೇಶ್ ಬರಗೂರು, ಸಣ್ಣ ಅಗರೆಪ್ಪ, ಶರಣೇಗೌಡ ಬೂದಗುಂಪಾ, ರೈತರಾದ ಮುತ್ತಪ್ಪ ಮೂಲಿಮನಿ, ಬಡೇಸಾಬ್, ವೀರೇಶ್ ಸುಂಕದ್, ಬಸರಿಕಟ್ಟೆ ಆದೆಪ್ಪ, ಮಲ್ಲನಗೌಡ ಹೊಸಮನಿ, ಅಮರೇಶ್, ಮಹಮ್ಮದ್ ಸಾಬ್ ನೀರಮಾನ್ವಿ, ಎಡಿಸಿ ಸಿದ್ದರಾಮೇಶ್ವರ, ಎ.ಸಿ.ಮಹೇಶ್ ಮಾಲಗಿತ್ತಿ, ಕೃಷಿ ಇಲಾಖೆ ಜೆ.ಡಿ ರುದೇಶಪ್ಪ, ಕೃಷಿ ಇಲಾಖೆ ಎ.ಡಿ ಅಭಿಲಾಶಾ ಸಿ.ಆರ್, ತಾಪಂ ಇಒ ಲಕ್ಷ್ಮೀದೇವಿ, ತಹಸೀಲ್ದಾರ್ ಎಂ.ಕುಮಾರಸ್ವಾಮಿ, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಾದ ಶರಣಪ್ಪ, ಸುಧಾಕರ್ ಯಳಮಟ್ಟಿ ಸೇರಿ ಇತರರಿದ್ದರು.