ಮಕ್ಕಳಿಗೆ ವಾರದಲ್ಲಿ 3 ದಿನ ಮೊಟ್ಟೆ; ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆಗೆ ಪ್ರಯತ್ನ

01122021 Siddapur Egg distribution
Published on

ಮುಖ್ಯಶಿಕ್ಷಕ ಖಾಸೀಂ ಸಾಹೇಬ್ ಹೇಳಿಕೆ


ಸಿದ್ದಾಪುರ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದ್ದು, 8ನೇ ತರಗತಿ ವಿದ್ಯಾರ್ಥಿಗಳಿಗೆ ಬಾಳೆಹಣ್ಣು, ಮೊಟ್ಟೆ ನೀಡುವ ಯೋಜನೆ ಜಾರಿಗೊಳಿಸಿದೆ ಎಂದು ಮುಖ್ಯಶಿಕ್ಷಕ ಖಾಸೀಂ ಸಾಹೇಬ್ ಹೇಳಿದರು.

ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಬುಧವಾರ 8ನೇ ತರಗತಿ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಹಾಗೂ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಹೊಂದಬೇಕೆಂಬ ನಿಟ್ಟಿನಲ್ಲಿ ಮಧ್ಯಾಹ್ನ ಬಾಳೆಹಣ್ಣು ಹಾಗೂ ಮೊಟ್ಟೆಯನ್ನು ವಾರದಲ್ಲಿ ಮೂರು ದಿನ ವಿತರಿಸಲಾಗುವುದು ಎಂದರು. ಶಿಕ್ಷಕರಾದ ಹೇಮಂತ್, ಹನುಮಂತಪ್ಪ, ಆನಂದ ಹಣವಾಳ, ಮುಖಂಡ ಶ್ರೀಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net